ಫೋಟೊ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಸ್ಥಳೀಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಹೈಸ್ಕೂಲ್ ವಿದ್ಯಾರ್ಥಿಗಳು ಫೆಬ್ರವರಿ 22 ರಂದು ಬಸ್ ನಿಲ್ದಾಣದ ಪ್ರದೇಶದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು.

ಪ್ರತಿಯೊಂದು ಪ್ರಾಣಿಗಳನ್ನು ಬಹಳ ದಯೆಯಿಂದ, ಪ್ರೀತಿಯಿಂದ ಸಾಕಿ ಸಲಹ ಬೇಕು. ಅವುಗಳಿಗೂ ಮನಸ್ಸು ಇದೆ. ಬೀದಿ ನಾಯಿಗಳು ಕೂಡ ಬಹಳ ಉತ್ತಮ ರೀತಿಯಲ್ಲಿ ಸಹಕರಿಸುತ್ತವೆ ಎನ್ನುವ ಹಲವಾರು ಅಂಶಗಳನ್ನು ತಮ್ಮ ಬೀದಿ ನಾಟಕಗಳಲ್ಲಿ ಪ್ರದರ್ಶಿಸಿದರು. ಬಸ್ಸಿಗಾಗಿ ಕಾಯುತ್ತಿದ್ದ ಹಲವಾರು ಮಂದಿ ಈ ನಾಟಕವನ್ನು ನೋಡಿ ಹಲವಾರು ಅಂಶಗಳನ್ನು ತಿಳಿದುಕೊಂಡರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ವಿದ್ಯಾಸಂಸ್ಥೆಯ ಶಿಕ್ಷಕರು ಹಾಜರಿದ್ದರು.