ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಹದಿನೆಂಟು ಮಾಗಣೆಗಳ ಪುತ್ತಿಗೆ ದೇವಾಲಯದ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭಗೊಂಡಂತೆ ಕಂಡುಬರುತ್ತಿದೆ.
ಇಡೀ ಊರಿಗೆ ಊರೇ ಭರ್ಜರಿ ಕಟೌಟ್ ಗಳು, ಎಲ್ಲರೂ ಕೂಡಿ ದೇವಾಲಯದಲ್ಲಿ ನಡೆಸುತ್ತಿರುವ ಅಂತಿಮ ಹಂತದ ಕರಸೇವೆ, ಸಂಪಿಗೆಯಿಂದ ರಸ್ತೆ ಅಗಲಗೊಂಡು ಡಾಮರು ಕಾರ್ಯ ಆರಂಭವಾಗಿದೆ. ನಾಗು ನದಿಯ ಸೇತುವೆ ಕಾರ್ಯ ಕೂಡಾ ಮುಕ್ತಾಯದ ಹಂತದಲ್ಲಿದೆ.