ಮೂಡುಬಿದಿರೆ: ಜೆಸಿಐ ಮೂಡಬಿದ್ರಿ ತ್ರಿಭುವನ್ ಮತ್ತು ತನ್ಮಯ್ ಟೆಕ್ನಾಲಜಿ ಮೂಡಬಿದ್ರಿ ಇದರ ಜಂಟಿ ಆಶ್ರಯದಲ್ಲಿ ಮೂರು ದಿನದ ರಾಜ್ಯಮಟ್ಟದ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿಯು ಸಮಾಜ ಮಂದಿರದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಜೆಸಿಐ ಪೂರ್ವ ಅಧ್ಯಕ್ಷರಾದ ಶಾಂತಲಾ ಆಚಾರ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜೆಸಿಐ ಹಲವಾರು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನಡೆಸುವುದರ ಮೂಲಕ ಯುವಕರಲ್ಲಿ ನಾಯಕತ್ವ ಕೌಶಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆಸಿ ನವೀನ್ ಟಿ ಆರ್ ಮಾತನಾಡಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿಯಿಂದ ಸ್ವ ಉದ್ಯೋಗ ಮಾಡಲು ಉತ್ತಮವಾದ ಅವಕಾಶ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಮೂಡಬಿದ್ರಿ ತ್ರಿಭುವನ್ ಅಧ್ಯಕ್ಷರು ಮತ್ತು ತನ್ಮಯ್ ಟೆಕ್ನಾಲಜಿ ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ವಹಿಸಿದ್ದಾರೆ.ರಾಜ್ಯದ ವಿವಿಧ ಭಾಗದಿಂದ 25 ಕ್ಕೂ ಮೇಲ್ಪಟ್ಟು ಎಲೆಕ್ಟ್ರಾನಿಕ್ ಟೆಕ್ನಿಷಿಯನ್ ಗಳು ಭಾಗವಹಿಸಿದರು.