ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಜಂಕ್ಷನ್ ಬಳಿ ಬಾರಿ ಗಾತ್ರದ ಕಂಟೇನರ್ ಲಾರಿ ಮುಗ್ಗುಚಿ ಬಿದ್ದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ರಾತ್ರಿ 10:15 ಇದಕ್ಕೆ ನಡೆದಿದೆ
ಮಣಿಪಾಲ ಕಡೆಯಿಂದ ಪಣಂಬೂರು ಬಂದರ್ ಮೂಲಕ ಚೀನಾ ದೇಶಕ್ಕೆ ರವಾನೆ ಮಾಡುತ್ತಿದ್ದ ಮೀನು ಹುಡಿ ಸಾಗಿಸುತ್ತಿದ್ದ ಕಂಟೇನರ್ ಕೋಲ್ನಾಡ್ ಜಂಕ್ಷನ್ ಬಳಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಹೆದ್ದಾರಿ ಬಂದಿಯಲ್ಲಿದ್ದ ಗೂಡಂಗಡಿ ಧ್ವಂಸಗೊಳಿಸಿ ಮುಗ್ಗುಚಿ ಬಿದ್ದಿದೆ
ಅಪಘಾತ ಸಂದರ್ಭದಲ್ಲಿ ಲಾರಿಯ ಚಾಲಕನಾಗಿ ಉತ್ತರ ಕರ್ನಾಟಕ ಮೂಲದ ಕೊಪ್ಪಳ ನಿವಾಸಿ ಅಶೋಕ್ (35) ಗಂಭೀರ ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಚಾಲಕನನ್ನು ದಾಖಲಿಸಿದ್ದಾರೆ.
ಸ್ಥಳಕ್ಕೆ ಮುಲ್ಕಿ ವಲಯದ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಪಘಾತದಲ್ಲಿ ಕಂಟೆನರ್ ಮುಗ್ಗುಚಿ ಬಿದ್ದ ಸ್ಥಳದ ಕೂಗಳತೆ ದೂರದಲ್ಲಿ ಆಟೋ ನಿಲ್ದಾಣ ವಿದ್ದು ಆಟೋ ಚಾಲಕರು ಬಾರೀ ಅಪಾಯದಿಂದ ಪಾರಾಗಿದ್ದಾರೆ.