ಮಂಗಳೂರು, ಜ 22: ಜನವರಿ 22ರಂದು ಬೆಳ್ತಂಗಡಿಯ ಗುರುದೇವ ಕಾಲೇಜು ಆವರಣದಲ್ಲಿ ಜೀಟಿಗೆ ಬಿಲ್ಲವ ಜನಪದ ಸಮ್ಮೇಳನ 2023 ನಡೆಯಿತು.
ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಮುದ್ದ ಗುತ್ತಿನವರಾದ ಮಾಜೀ ಶಾಸಕ ವಸಂತ ಬಂಗೇರ ಅವರು ಮಾತನಾಡಿ ನಮ್ಮ ಗುತ್ತಿಗೆ ಸೇರಿದವರೇ 1,000ಕ್ಕೂ ಹೆಚ್ಚು ಜನರಿದ್ದಾರೆ. ಮೂರ್ತೆದಾರರು ಅದರಲ್ಲಿ ಲಾಭವಿದ್ದರೂ ಮಕ್ಕಳನ್ನು ಹೆಚ್ಚು ಓದಿಸಲು ಮರೆಯಬೇಡಿ. ಜನಾರ್ದನ ಪೂಜಾರಿಯವರು ಕುದ್ರೋಳಿಯಲ್ಲಿ ಹೆಣ್ಣು ಮಕ್ಕಳಿಂದ ಪೂಜೆ ಮಾಡಿಸಿದಾಗ ನಕ್ಕವರಿದ್ದಾರೆ.
283ರಷ್ಟು ಮೂರ್ತೆದಾರರಿಗೆ ಗೌರವಾರ್ಪಣೆ
ಅದು ಅವರ ಶಕ್ತಿ. ಬಿರುವರ ಬಯ್ದ್ಯಕೀಯ, ಮುಕಾಲಿಕೆ, ಗುತ್ತು ಬರ್ಕೆ ಮೊದಲಾದವುಗಳನ್ನು ಅವರು ಉದಾಹರಣೆ ಸಹಿತ ಮಾತನಾಡಿದರು.
ಗಣೇಶ್ ಅಮೀನ್ ಸಂಕಮಾರ್ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದ ಪೂಜಾರಿ ಎಲ್ಲಡ್ಕ ಗೌರವ ಉಪಸ್ಥಿತರಿದ್ದರು.