ಮುಲ್ಕಿ:  ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ  ನಡೆಯುತ್ತಿದ್ದು ಶ್ರೀ ದೇವರಿಗೆ ಪೂರ್ವಾಹ್ನ ಗಂಟೆ 10:25ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವಸ್ಥಾನದ ತಂತ್ರಿಗಳಾದ ಶಿವಪ್ರಸಾದ ತಂತ್ರಿ ,ವೇ.ಮೂ ಪಂಜ ಭಾಸ್ಕರ ಭಟ್ ಹಾಗೂ ಅರ್ಚಕ ಗೋಪಾಲ ಭಟ್ ಪೌರೋಹಿತ್ಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಿತು. ಬಳಿಕ  ಮಹಾಪೂಜೆ, ಅವಸ್ಕೃತ ಬಲಿ ನಡೆಯಿತು, ಮಧ್ಯಾಹ್ನ ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಭಟ್, ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಾದೆಮನೆ ಜಯಂತ ರೈ, ಅನುವಂಶಿಕ ಮೊಕ್ತೇಸರ ಶೇಖರ ಶೆಟ್ಟಿ, ಸಮಿತಿಯ ಸದಸ್ಯರಾದ ಕೃಷ್ಣರಾವ್, ಅಕ್ಷಯ್ ಭಟ್, ದಿನೇಶ್ ಕೋಲ್ನಾಡು, ಮಾಧವ ಶೆಟ್ಟಿ ಉತ್ತಂಜೆ, ವಿನೋದ್ ಸಾಲ್ಯಾನ್, ವಿಜಯ ಶೆಟ್ಟಿ ಕೋಲ್ನಾಡ್, ವಿದ್ಯಾಧರ ಶೆಟ್ಟಿ ಕೋಲ್ನಾಡು ಗುತ್ತು, ರೋಹಿಣಿ ಶೆಟ್ಟಿ , ಕವಿತಾ ಶರತ್ ಬೆಳ್ಳಾಯರು,ಸುಮಿತ್ರಾ ಶೆಟ್ಟಿ, ಜನಾರ್ದನ ಶೆಟ್ಟಿಗಾರ್, ದಿನೇಶ್ ಶೆಟ್ಟಿ , ರೋಹಿಣಿ ಶೆಟ್ಟಿ ಕರುಣಾಕರ ಶೆಟ್ಟಿ, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಧರ್ಮಾನಂದ ಶೆಟ್ಟಿಗಾರ್, ಹರಿಪ್ರಸಾದ್, ಗಣೇಶ್ ತಂತ್ರಿ ಕೋಲ್ನಾಡು,ನಿರುಪಮಾ ಶೆಟ್ಟಿ, ಶಮೀನಾ ಆಳ್ವ ಲಕ್ಷ್ಮಣ್ ಸಾಲ್ಯಾನ್, ಪ್ರಮೋದ್ ಶೆಟ್ಟಿ, ದಿನೇಶ್ ಪೂಜಾರಿ ಬಾಲೆಟ್ಟು, ರಾಮ ಕೋಟ್ಯಾನ್ ಕೊಲ್ನಾಡು, ಸಂಧ್ಯಾ ಡಿ ಶೆಟ್ಟಿ, ಸುಭಾಷ್ಚಂದ್ರ ಭಂಡಾರಿ, ಶ್ವೇತಾ ಡಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.