ವರದಿ/ರೋನ್ಸ್ ಬಂಟ್ವಾಳ್

ಮುಂಬಯಿ: ರಾಷ್ಟ್ರದ ಸಹಕಾರಿ ಕ್ಷೇತ್ರದಲ್ಲಿ ಸ್ವಂತಿಕೆಯ ಪ್ರತಿಷ್ಠಿತ ಸ್ಥಾನ ಪಡೆದ ದಿ.ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಗೆ  ಸೈಬರ್ ಸುರಕ್ಷತಾ ಅನುಸ್ಥಾಪನೆಗಾಗಿ ಬೆಸ್ಟ್-ಇನ್-ಕ್ಲಾಸ್ ಆವಾರ್ಡ್‍ಗೆ ಭಾಜನವಾಗಿದ್ದು ಶುಕ್ರವಾರ ಸಂಜೆ ಮುಂಬಯಿಯಲ್ಲಿನ ಫೋರ್ ಸೀಸನ್ಸ್ ಹೋಟೆಲ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಗ್ಲೋಬಲ್ ಫಿನ್‍ಟೆಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು  ಭಾರತ್ ಬ್ಯಾಂಕ್ ತನ್ನ ಮುಡಿಗೇರಿಸಿ ಕೊಂಡಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ಲೋಬಲ್ ಇಂಟೆಲಿಜನ್ಸ್‍ನ ಕಾರ್ಯಾಧ್ಯಕ್ಷ  ಸಜೀವ್ ಆನಂದ್, ಬ್ಯಾಂಕ್ ಆಫ್ ಬರೋಡಾ ಆಡಳಿತ ಮಂಡಳಿತ ಸದಸ್ಯ ಡಾ| ರವಿ ಮೆನನ್ ಉಪಸ್ಥಿತರಿದ್ದು, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿದರು.ಈ ಶುಭಾವಸರದಿ ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ ಎಸ್.ಕಾರ್ಕೆರಾ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್, ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ(ಸಿಐಎಸ್‍ಓ) ಭಾಸ್ಕರ್ ರಾವ್ ಉಪಸ್ಥಿತರಿದ್ದು ಪುರಸ್ಕಾರ ಫಲಕ ಸ್ವೀಕರಿಸಿದರು.