ಮುಂಬಯಿ: ಚೆಂಬೂರು ಕರ್ನಾಟಕ ಹೈಸ್ಕೂಲ್‍ನ ಸಭಾಂಗಣದಲ್ಲಿ ಕಳೆದ (ಮಾ.29) ಶನಿವಾರ ಚೆಂಬೂರು ಕರ್ನಾಟಕ ಸಂಘ ತನ್ನ 21ನೇ ವಾರ್ಷಿಕ `ಸಾಹಿತ್ಯ ಸಹವಾಸ-2025'ನ್ನು ಸಂಭ್ರಮಿಸಿದ್ದು ಮುಂಬಯಿ ಉಚ್ಛನ್ಯಾಯಲಯದ ನ್ಯಾಯವಾದಿ ಅಶೋಕ್ ಡಿ.ಶೆಟ್ಟಿ ಪ್ರಧಾನ ಅತಿಥಿsಯಾಗಿ ದ್ದು ಸಮಾರಂಭಕ್ಕೆ ಚಾಲನೆಯನ್ನಿತ್ತರು ಹಾಗೂ ಸಂಘದ ವಾರ್ಷಿಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನಿಸಿದರು.
ನ್ಯಾಯವಾದಿ ಅಶೋಕ್ ಶೆಟ್ಟಿ ಮಾತನಾಡಿ ಚೆಂಬೂರು ಕರ್ನಾಟಕ ಸಂಘದೊಂದಿಗೆ ಹಿಂದಿನಿಂದಲೂ ನನಗೆ ನಿಕಟ ಸಂಪರ್ಕವಿದೆ. ಕಾನೂನು ಕಾಲೇಜ್ ಆರಂಭಿಸುವಾಗಲೂ ಅಂದಿನ ಅಧ್ಯಕ್ಷರಾಗಿದ್ದ ಅಡ್ವಕೇಟ್ ಹೆಚ್.ಕೆ ಸುಧಾಕರ ಅರಾಟೆ ಅವರೊಂದಿಗೆ ನಾನು ಸಹಕರಿಸಿದ್ದೆ. ರಾಷ್ಟ್ರದ ಸದ್ಪ್ರಜೆಗಳನ್ನಾಗಿಸುವ ಈ ಶಿಕ್ಷಣ ಸಂಸ್ಥೆಯ ಎಲ್ಲಾ ಯೋಜನೆಗಳು ನಿರ್ವಿಘ್ನವಾಗಿ ಸಿದ್ಧಿಯಾಗಲಿ ಆ ಮೂಲಕ ಎಲ್ಲರ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಚಂದ್ರಕಾಂತ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ, ಗೌ| ಪ್ರ| ಕಾರ್ಯ ದರ್ಶಿ ವಿಶ್ವನಾಥ್ ಎಸ್. ಶೇಣವ, ಗೌ| ಪ್ರ| ಕೋಶಾಧಿಕಾರಿ ಅರುಣ್‍ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಪ್ರಭಾಕರ್ ಬಿ.ಬೋಳಾರ್ ಮತ್ತಿತರರು ವೇದಿಕೆಯಲ್ಲಿ ಆಸೀನರಾಗಿದ್ದರು.
ಸಂಘದ ವಾರ್ಷಿಕ ಪ್ರತಿಷ್ಠಿತ `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2025'ನ್ನು ನಿವೇದಿತಾ ಹಾವನೂರು ಹೊನ್ನಟ್ಟಿ ಅವರಿಗೆ ಪ್ರದಾನಿಸಲಾಯಿತು ಹಾಗೂ ಸಂಘದ `ದಿ| ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಯನ್ನು ವಡಾಲ ಎಸ್‍ಕೆಇಎಸ್ ಶಾಲೆಯ ನಿವೃತ್ತ ಶಿಕ್ಷಕ ರಾಮ ಆಚಾರ್ಯ ಅವರಿಗೆ `ಸುಬ್ಬಯ್ಯ ಶೆಟ್ಟಿ ದತ್ತಿ' ಪುರಸ್ಕಾರವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಉಪನ್ಯಾಸಕಿ ನಿವೃತ್ತ ಪ್ರಾಚಾರ್ಯರಾದ ಡಾ| ಉಮಾರಾವ್ ಮತ್ತು ತುಳುವ ಕನ್ನಡಿಗರಿಗಾಗಿ ನೀಡುವ ಮೇರು ಪುರಸ್ಕಾರ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಣಾರ್ಥ' ಪ್ರಶಸ್ತಿಯನ್ನು ಲೇಖಕಿ ಅನಿತಾ ಪಿ.ತಾಕೋಡೆ ಅವರಿಗೆ ಅತಿಥಿಗಳು ಪ್ರದಾನಿಸಿ ಅಭಿನಂದಿಸಿದ ರು. ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಗೌರವಕ್ಕಾಗಿ ಅಭಿವಂದಿಸಿದರು.
ಏಳು ದಶಕಗಳ ಹಿಂದೆ ಕೆಲವೇ ಮಕ್ಕಳ ವಿದ್ಯಾರ್ಜನೆಯೊಂದಿಗೆ ಆರಂಭ ಗೊಂಡಿದ್ದ ಚೆಂಬೂರು ಕರ್ನಾಟಕ ಸಂಘದ ಹೈಸ್ಕೂಲು ಪ್ರಸ್ತುತ ಪೂರ್ವ, ಪ್ರಾಥಮಿಕ, ಪ್ರೌಢಶಾಲೆ, ಕಿರಿಯ ಪ್ರಾಥಮಿಕ, ಮಹಾ ವಿದ್ಯಾಲಯ, ನೈಟ್ ಕಾಲೇಜ್ ಮತ್ತು ಕಾಲೇಜ್ ಆಫ್ ಲಾ (ಕಾನೂನು) ಇತ್ಯಾದಿಗಳಾಗಿ ಶೈಕ್ಷಣಿಕ ಕ್ಷೇತ್ರದ ಶಿಖರದತ್ತ ಸಾಗಿರುವುದು ಹೆಮ್ಮೆಯೆನಿಸುತ್ತಿದೆ. ಪ್ರತಿವರ್ಷ ಸಾಹಿತ್ಯ ಸಹವಾಸ ಕಾರ್ಯಕ್ರಮದೊಂದಿಗೆ ಅರ್ಹ ವ್ಯಕ್ತಿಗಳಿಗೆ ಸ್ಮಾರಕ ಪ್ರಶಸ್ತಿಗಳನ್ನು ಪ್ರದಾನಿಸಿ ನಾವು ನೀಡುತ್ತಾ ಬಂದಿದೆ. ಇಂತಹ ಚೆಂಬೂರು ಕರ್ನಾಟಕ ಸಂಘ ಹಾಗೂ ವಿದ್ಯಾಸಂಸ್ಥೆಯನ್ನು ಆರಂಭಿಸಿದವರೆಲ್ಲರೂ ಸದಾ ಪ್ರಾತಃಸ್ಮರಣೀಯರು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಚಂದ್ರಕಾಂತ್ ನಾಯಕ್ ಅಭಿಪ್ರಾಯ ಪಟ್ಟರು.
ಚೆಂಬೂರು ಕರ್ನಾಟಕ ಹೈಸ್ಕೂಲು ವಿದ್ಯಾರ್ಥಿಗಳು ಹಾಗೂ ಪಾಲಕರು ತುಳುಕನ್ನಡಿಗರು ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿೂರಾಭಯಂದರ್ ಯಕ್ಷಪ್ರಿಯ ಬಳಗದ ಉದಯೋನ್ಮುಖ ಬಾಲಕಲಾವಿದರು ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ನಿರ್ದೇಶನದಲ್ಲಿ ಕದಂಬ ಕೌತಿಕೆ ಎಂಬ ಯಕ್ಷಗಾನವನ್ನು ಪ್ರದ್ರಶಿಸಿದರು.
ಪ್ರಭಾಕರ್ ಬಿ.ಬೋಳಾರ್ ಸ್ವಾಗತಿಸಿದರು. ವಿಜೇತಾ ಸುವರ್ಣ, ಲಕ್ಷತಾರಾವ್, ಭಾರತಿ ಶೆಟ್ಟಿ, ಅರ್ಚನಾ ಪೂಜಾರಿ ಸನ್ಮಾನಪತ್ರ ವಾಚಿಸಿದರು. ವಿದ್ಯಾಸಂಸ್ಥೆಯ ಪ್ರಾಧ್ಯಾಪಿಕೆ ಶ್ಯಾಮಲ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಎಸ್. ಶೇಣವ ಆಭಾರ ಮನ್ನಿಸಿದರು.