ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ:  ಬಿಎಸ್ ಕೆಬಿಎ ಇದರ ಇಂದಿನ ಕಾರ್ಯಕ್ರಮಗಳು ಎಲ್ಲಾ ಅರ್ಥದಲ್ಲಿ ಐತಿಹಾಸಿಕವಾಗಿದೆ. ಇವೆಲ್ಲವುಗಳಿಂದ ಬಿಎಸ್ ಕೆಬಿಎ ಇತಿಹಾಸದ ಪುಟ ಸೇರಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಒಂದು ಸಂಸ್ಥೆಯು ನೂರು ವರ್ಷಗಳ ಇತಿಹಾಸವನ್ನು ಪೂರ್ಣಗೊಳಿಸುವುದನ್ನು ನೀವು ಪ್ರತಿದಿನ ನೋಡಲಾಗದು. ಇದು ಅಸಾಧಾರಾನಿಯ. ಈ ಅದ್ಭುತ ಕಾರ್ಯಕ್ಕೆ ನಿಮ್ಮೆಲ್ಲರ ಸಾಂಘಿಕ ಕೆಲಸ ಕಾರಣವಾಗಿದೆ. ಇದು ಭಾವಿ ಜನಾಂಗಕ್ಕೂ ಉತ್ತಮ ಯೋಜನೆಯಾಗಬೇಕು ಎಂದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೆಂಗಳೂರು ಲೋಕಸಭಾ ಸದಸ್ಯ ಹಾಗೂ ಅಖಿಲ ಭಾರತ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ತೇಜಶ್ವಿ ಸೂರ್ಯ ತಿಳಿಸಿದರು.

ರಾಷ್ಟ್ರದ ಆಧಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟು ಪ್ರಸ್ತುತ ನೂರರಲ್ಲಿನ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಯಾನ್ ಸಂಸ್ಥೆಯು ಆಚರಿಸುತ್ತಿರುವ ಶತಮಾನೋತ್ಸವ ಸಂಭ್ರಮದ ಸಾಂಸ್ಕೃತಿಕ ವೈಭವಕ್ಕೆ ಇಂದಿಲ್ಲಿ ಭಾನುವಾರ ಸಂಜೆ ಸಯಾನ್ ಪೂರ್ವದ ಕಿಂಗ್‌ಸರ್ಕಲ್‌ನ  ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಅತಿಥಿಗಳು ಹಿಂಗಾರವನ್ನು ಅರಳಿಸಿ ಕಳಸೆಯಲ್ಲಿರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು.

ಸಂಸ್ಥೆಯನ್ನು ಮುನ್ನಡೆಸುವವರು ಏನು ಯೋಚಿಸುತ್ತೀರಿ ಅನ್ನೋದು ಸಂಸ್ಥೆಯ ನಾಯಕರಲ್ಲಿನ ಮನೋಧರ್ಮವನ್ನು ಅವಲಂಬಿತವಾಗಿರುತ್ತದೆ. ಇದು ಕಾಲಕ್ಕೆ ಮಾತ್ರ ಪ್ರಸ್ತುತವಾಗಬಾರದು ಬದಲಾಗಿ, ಆ ಸಂಸ್ಥೆಯನ್ನು ಮುನ್ನಡೆಸಿರುವವರ ತ್ಯಾಗ, ಉದ್ದೇಶಗಳನ್ನು ತಿಳಿದಿರಬೇಕು. ಸಂಸ್ಥೆಗಳಲ್ಲಿನ ವ್ಯವಹಾರಗಳ ಚುಕ್ಕಾಣಿ ಹಿಡಿದವರು ಅಸಾಧಾರಣ ಒಳಪರಿಚೆ ಹೊಂದಿರಬೇಕು. ಇಂತಹ ಸದ್ಗುಣತೆ ಹೊಂದಿರುವ  ಬಿಎಸ್‌ಕೆಬಿಎಗೆ ಮಾತ್ರ ಈ ಕೆಲಸ ಮಾಡಲು ಸಾಧ್ಯವಾಗಿದೆ. ನೀವು ಈ ಕೆಲಸವನ್ನು ಸಮರ್ಥರಾಗಿ ಮಾಡಿರುವಿರಿ. ಕನಿಷ್ಠ ಮೂರು ತಲೆಮಾರಿನ ನಾಯಕರು ಈ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿದ್ದು ಇದು ನಂಬಲಸಾಧ್ಯವಾಗಿದೆ. ನೀವು ಈ ಕೆಲಸವನ್ನು ಮಾಡಿದ್ದೀರಿ ಎಂದು ಕಾಣ್ತುಂಬ ನೋಡಲು ಸಂತೋಷವಾಗುತ್ತಿದೆ ಎಂದೂ ತೇಜಶ್ವಿ ಸೂರ್ಯ ಅಭಿಪ್ರಾಯ ಪಟ್ಟರು.

ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು  ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಭಾರತ ಅಂಚೆಯ ಮಹಾರಾಷ್ಟ್ರ - ಗೋವಾ ವೃತ್ತದ  ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅಮಿತಾಭ್ ಸಿಂಗ್, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವಿದ್ವಾನ್ ವೇದಮೂರ್ತಿ ಪಂಜ ಭಾಸ್ಕರ್ ಭಟ್, ಕರ್ನಾಟಕ ಬ್ಯಾಂಕ್‌ನ ಅರೆಕಾಲಿಕ ಕಾರ್ಯಾಧ್ಯಕ್ಷ ಪಿ. ಪ್ರದೀಪ್ ಕುಮಾರ್ ಅತಿಥಿ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು, ಬಿಎಸ್‌ಕೆಬಿಎ ವಿನ್ಯಾಸಗೊಳಿಸಿದ ವಿಶೇಷ ಲಕೋಟೆ, ಪೋಸ್ಟಲ್ ಕವರ್ ಅಂಚೆ ಚೀಟಿ, ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಅದ್ಭುತವಾದ ನೂರು ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ ಬಿಎಸ್‌ಕೆಬಿಎ ಸಂಸ್ಥೆಗೆ ಅಭಿನಂದನೆಗಳು. ಇಂದು ನಾವು ಇಲ್ಲಿನ ವಿಶೇಷ ಪೋಸ್ಟಲ್ ಕವರ್‌ನ್ನು ಬಿಡುಗಡೆ ಮಾಡುವ ಮೂಲಕ ಮಹತ್ವದ  ಹೆಗ್ಗುರುತು ಸಾಧನೆಗೆ ಸಾಕ್ಷಿಯಾಗಿದ್ದು  ನಿಜವಾಗಿಯೂ ಸಂತೋಷಪಡುತ್ತೇವೆ.  ಬಿಎಸ್‌ಕೆಬಿಎ ವಿನ್ಯಾಸಗೊಳಿಸಿದ ವಿಶೇಷ ಲಕೋಟೆ, ಪೋಸ್ಟಲ್ ಕವರ್ ವಿಶೇಷತೆಯ ಪ್ರತಿಕವಾಗಿ ಒಂದು ವೈಶಿಷ್ಟಯ್ಯತೆಯ ಮುದ್ರೆಯನ್ನು ಹೊಂದಿದೆ.  ಭಾರತ ಸರ್ಕಾರವು ಒದಗಿಸಿದ ಅದ್ಭುತ ಸೇವಾಕಾರ್ಯದ ಮೂಲಕ ಇದು ಅಂಗೀಕಾರವಾಗಿದೆ. ಸಹಜವಾಗಿ ಹಲವು ದಶಕಗಳ  ಮೇಲೆ ಒಂದು ಮುದ್ರೆಯಾಗಿದೆ. ಆರಂಭದಿಂದ ಸಂಸ್ಥೆಯಲ್ಲಿನ ಎಲ್ಲರೂ ಮಾಡಿದ ಅಗಾಧವಾದ ಸಾಧನೆಗಳ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಗುತ್ತಿದೆ. ನನ್ನ ಹೃನ್ಮಗಳಲ್ಲಿ ನೂರು ವರ್ಷಗಳು ಪೂರೈಸಿದೆ ಎಂದು ಭಾವಿಸುತ್ತೇನೆ ಆದರೆ ಮುಂದಿನ ದಶಕಗಳಲ್ಲಿ ಅದು ಇನ್ನೂ ದೊಡ್ಡ ಕೊಡುಗೆಯಾಗಿ ಮುನ್ನಡೆಯಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಅಮಿತಾಭ್ ಸಿಂಗ್ ನುಡಿದರು.

ಭಾಸ್ಕರ್ ಭಟ್ ಮಾತನಾಡಿ ಬಿಎಸ್‌ಕೆಬಿ  ಕೆಲಸ ಮಾಡಿದೆ ಎಂಬುದಕ್ಕಾಗಿ ಜನತೆಯನ್ನು ಆಕರ್ಷಿಸಿತು. ಸದ್ಯದ ಬೆಳವಣಿಗೆಯ ಎಲ್ಲಾ ಶ್ರೇಯಸ್ಸು ಡಾ|ಸುರೇಶ್ ರಾವ್ ಮತ್ತು ಅವರ ಪದಾಧಿಕಾರಿಗಳಿಗೆ  ಸಲ್ಲುತ್ತದೆ.   ನೂರು ವರ್ಷಗಳಷ್ಟು ಹಳೆಯದಾದ ಬಿಎಸ್‌ಕೆಬಿಎ ಶತವರ್ಷ ಹಳೆಯದು ಎಂದು ನಿಮಗೆ ತಿಳಿದಿದೆ. ಇವತ್ತು ನಾನು ಇಲ್ಲಿ ಇದ್ದರೆ ಆದಕ್ಕೆ  ನನ್ನ ತಾಯಿ ಕಾರಣ. ಅವರಿಂದ ನಾನು ಇಲ್ಲಿರಲು ಅರ್ಹನಾಗಿದ್ದೇನೆ ಎಂದು ತಿಳಿದಿದ್ದೇನೆ. ಈ ಅಸೋಸಿಯೇಶನ್‌ನಲ್ಲಿ ನಾವು ಬಂಧವ್ಯದ ಗೌರವವನ್ನು ಹೊಂದಿರಬೇಕು. ಈ ಸಂಸ್ಥೆಯನ್ನು ಉತ್ತುಂಗಕ್ಕೆರಿಸಿದ ಕೊಡುಗೆ ನೀಡಿದವರಿಗೆ ಗೌರವ ಸಲ್ಲಿಸಬೇಕು.  ಡಾ| ರಾವ್ ಹೇಳಿದಂತೆ ಇದು ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಸಮುದಾಯದ ಒಡನಾಟದ ಕೇಂದ್ರವಾಗಿದ್ದು ಮುಂದಿನ ನೂರಾರು ವರ್ಷಗಳವರೆಗೆ ನಮ್ಮ ಮೈಲಿಗಳ್ಳುವಾಗಿ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದರು.

ಪ್ರದೀಪ್ ಕುಮಾರ್ ಮಾತನಾಡಿ ಇತಿಹಾಸದಲ್ಲಿ ನೀವು ನೋಡಿದರೆ ಹೆಚ್ಚಿನ ಸಂಸ್ಥೆಗಳು ದಶಕಗಳನ್ನೇ ಮೀರುವುದಿಲ್ಲ. ಆದ್ದರಿಂದ, ಯಾವುದೇ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವುದು ಅವಶ್ಯ. ನನ್ನ ಪ್ರಕಾರ ಸಂಸ್ಥೆಗಳು ನೂರು ವರ್ಷ ಬಾಳುವುದು ಐಕ್ಯತಾಭಾವದ ಸೇವೆಯಗಿರುತ್ತದೆ. ಡಾ| ಸುರೇಶ್ ರಾವ್ ಅವರು ಭವಿಷ್ಯದ ಕಾರ್ಯಕ್ರಮಗಳನ್ನು ತಿಳಿಸಿರುವುದನ್ನು ಕೇಳಿದ್ದೀರಿ. ನೀವು ಈಗಾಗಲೇ ವೃದ್ಧಾಶ್ರಮವನ್ನು ಹೊಂದಿದ್ದೀರಿ. ಕರ್ಣಾಟಕ ಬ್ಯಾಂಕ್ ಇದರೊಂದಿಗೆ ಸೇರಿಕೊಂಡಿರುವುದಕ್ಕೆ ಹೆಮ್ಮೆಯಿದೆ. ನಮ್ಮ ಶಾಖೆಯೂ ಅದೇ ಕಟ್ಟಡದಲ್ಲಿದೆ ಮತ್ತು ಆಶ್ರಯ ಕೈಗೊಳ್ಳುತ್ತಿರುವ ಹೊಸ ಯೋಜನೆಗಳೊಂದಿಗೆ ನಾವು ಸಹ ಸಂಯೋಜಿಸುತ್ತಿದ್ದೇವೆ. ಇಂತಹ ಸಂಸ್ಥೆಗಳು ಅಸ್ತಿತ್ವದಲ್ಲಿವೆ ಏಕೆಂದರೆ ಅವು ಸಮಾಜದ ಬದಲಾಗುತ್ತಿರುವ ಅಗತ್ಯಗಳಿಗೆ ನಿರಂತರವಾಗಿ ವಿಕಸನಗೊಳಿಸುತ್ತವೆ. ಬಿಎಸ್‌ಕೆಬಿ ನೂರು ವರ್ಷಗಳನ್ನು ಪೂರೈಸಿದಕ್ಕಾಗಿ  ಅಭಿನಂದಿಸುತ್ತೇನೆ ಮತ್ತು ಇದು ಮತ್ತಷ್ಟು ತನ್ನ ಸದಸ್ಯರ ಹಿತಾಸಕ್ತಿಗಳಿಗೆ ಸ್ಪಂದಿಸಲಿದೆ ಎಂದು ಭಾವಿಸುತ್ತೇನೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಹಿತಾಸಕ್ತಿಗಳನ್ನು ಪೂರೈಸಲಿದೆ ಎಂದು ತಿಳಿಯುವೆ. ಬ್ಯಾಂಕ್ ಇಂತಹ ಸಂಸ್ಥೆಯ ಭಾಗವಾಗಲು ಒದಗಿಸಿದ ಅವಕಾಶಕ್ಕಾಗಿ  ಅವರಿಗೆ ತುಂಬಾ ಧನ್ಯವಾದಗಳು. ಬಿಎಸ್‌ಕೆಬಿಎ  ಮುಂದಿನ ಶತಮಾನದತ್ತ  ಫಲಪ್ರದವಾಗಿ ಮುನ್ನಡೆಯಲಿ ಎಂದು ಹಾರೈಸುವೆ ಎಂದರು.

ಡಾ| ಸುರೇಶ್ ರಾವ್ ಪ್ರಸ್ತಾವನೆಗೈದು ಇಂದು ನಾವು ಬಿಎಸ್‌ಕೆಬಿ ಅಸೋಸಿಯೇಶನ್ ನಮ್ಮ ಸಮುದಾಯ ಸಂಸ್ಥೆಯ ಶತಮಾನೋತ್ಸವ ವರ್ಷವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಬಿಎಸ್‌ಕೆಬಿಎ ಸಾಂಸ್ಕೃತಿಕ ಸಭಾಂಗಣಗಳಲ್ಲಿ  365 ದಿನಗಳಲ್ಲಿ ಸುಮಾರು 100 ಕಾರ್ಯಕ್ರಮಗಳನ್ನು ಗೋಕುಲದಲ್ಲಿ ನಡೆಸಲಿದ್ದೇವೆ. ಇವು ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ ಕಾರ್ಯಕ್ರಮಗಳಾಗಿವೆ.  ಈ ಶತಕವನ್ನು ಸ್ಮರಣೀಯವಾಗಿಸಲು ನಾವು ಕೆಲವು ಸ್ಮರಣಾರ್ಥ ಮತ್ತು ಸಾಹಿತ್ಯಿಕ ವಸ್ತುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದೇವೆ ಹಾಗೂ ಸಾಧಕ  ಜನರಿಗೆ ಗೌರವಿಸಲು ಉದ್ದೇಶಿಸಿದ್ದೆವೆ. ನಮ್ಮಲ್ಲಿ ಆಶ್ರಯ ಎಂಬ ಹಿರಿಯ ನಾಗರಿಕರತಾಣವಿದ್ದು, ಶತಮಾನೋತ್ಸವ ವರ್ಷದಲ್ಲಿ ಆಶ್ರಯದಲ್ಲಿ ನಾಲ್ಕು ಯಂತ್ರಗಳೊಂದಿಗೆ ಡಯಾಲಿಸಿಸ್ ಘಟಕವನ್ನು ಪ್ರಾರಂಭಿಸುವ ಮೂಲಕ ಈ ಸೌಲಭ್ಯವನ್ನು ಹೆಚ್ಚಿಸಲು ನಾವು ಪ್ರಸ್ತಾಪಿಸಿದ್ದೇವೆ. ಸ್ವಯಂ ನಿರ್ವಹಿಸಲು ಸಾಧ್ಯವಾಗದವರಿಗೆ  ನರ್ಸ್, ದಾದಿಯರು, ಫಿಸಿಯೋಥೆರಪಿಸ್ಟ್‌ಗಳು ಮತ್ತು ವೈದ್ಯರ ಸಹಾಯದ ಅಗತ್ಯವಿರುವ ಅಗತ್ಯಗಳನ್ನು ನೋಡಿಕೊಳ್ಳಲು ಸೌಲಭ್ಯಗಳನ್ನು ಸೇರಿಸಲು ಯೋಚಿಸಿದ್ದೆವೆ. ಗೋಕುಲದಲ್ಲಿ ಈಗಾಗಲೇ ಸಾಂಸ್ಕೃತಿಕ ಕೇಂದ್ರ ಹಾಗೂ ಸಮುದಾಯ ಕೇಂದ್ರವಿದೆ. ಶಾಸ್ತ್ರೀಯ ಸಂಗೀತ ಕಲಿಕೆ, ವಾದ್ಯ ಸಂಗೀತ ಬೋಧನೆ, ಜಾನಪದ ನೃತ್ಯಗಳು ಮತ್ತು ಸಾರ್ವಜನಿಕ ಭಾಷಣ ಮುಂತಾದ ಸಾಂಸ್ಕೃತಿಕ ಶಿಕ್ಷಣದ ಸೌಲಭ್ಯಗಳನ್ನು ಪ್ರಾರಂಭಿಸಿದ್ದೇವೆ. ಇತರ ಹಲವು ವಿಷಯಗಳನ್ನು ಪ್ರಾರಂಭಿಸುವ ಜೊತೆಗೆ ಇನ್ನಿತರ ತರಗತಿಗಳನ್ನು ವರ್ಷಪೂರ್ತಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮುಂದುವರಿಸುತ್ತೇವೆ. ಪ್ರತಿ ಅಧ್ಯಾಪನದಲ್ಲಿ ನಾವು ನಾಲ್ಕು ಸೌಲಭ್ಯಗಳನ್ನು ಪ್ರಾರಂಭಿಸಿದ್ದು  ಶಾಸ್ತ್ರೀಯ ಸಂಗೀತ, ತಬಲಾ, ಅಕ್ಷಯ ಗಾನ ಇವುಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ನಾವು ವರ್ಷದಿಂದ ವರ್ಷಕ್ಕೆ ಇನ್ನೂ ಅನೇಕಗಳನ್ನು ಪ್ರಾರಂಭಿಸಲು ಬಯಸುತ್ತೇವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹ್ಯಾಪಿ ಲಕ್ಕಿ ಎಂಟರ್‌ಟೇನ್ಮೆಂಟ್ ತಂಡವು ಬಹುಭಾಷಾ (ತುಳು, ಕನ್ನಡ, ಹಿಂದಿ ಮತ್ತು ಮರಾಠಿ ಚಲನಚಿತ್ರ ಹಾಡುಗಳು ಮನರಂಜನೆ) ಸಂಗೀತ ರಸಮಂಜರಿ ಪ್ರಸ್ತುತಪಡಿಸಿತು. ರಾಷ್ಟ್ರದ ಪ್ರಸಿದ್ಧ, ಭಾರತೀಯ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಅವಧೂತ ಗುಪ್ತೆ ತಂಡವು ಲೈವ್ ಆರ್ಕೆಸ್ಟ್ರಾದೊಂದಿಗೆ ಪ್ರಸ್ತುತ ಪಡಿಸಲಾದ ಲೈವ್‌ಇನ್ ಕನ್ಸರ್ಟ್‌ನಲ್ಲಿ ಹೆಸರಾಂತ ಸಂಗೀತಕಾರರಾದ ಸಂಜಯ್ ಮಹಾಲೆ, ಮಾಧುರಿ ಡೆ, ರವಿ ತ್ರಿಪಾಠಿ ಮತ್ತಿತರರು ಸಂಗೀತವನ್ನಿತ್ತರು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ವೈ.ಮೋಹನ್‌ರಾಜ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಬಿಎಸ್‌ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಕಲಾ ವೃಂದ ವಿಭಾಗಧ್ಯಕ್ಷೆ ವಿನೋದಿನಿ ರಾವ್, ಆಶ್ರಯ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುರಾಮ ಆಚಾರ್ಯ, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್,   ಕೃಷ್ಣ ಮಂಜರಬೆಟ್ಟು, ಐಟಿ ಮತ್ತು ಸಾಮಾಜಿಕ ಮಾಧ್ಯಮ ಸಮಿತಿ ಕಾರ್ಯಾಧ್ಯಕ್ಷ  ದೀಪಕ್ ಶಿವತ್ತಾಯ,  ಕುಸುಮಾ ಶ್ರೀನಿವಾಸ್,  ಗೋಪಾಲಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ರಾವ್, ಜಗದೀಶ್ ಚಂದ್ರಕುಮಾರ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಚಿತ್ರಾ ಮೇಲ್ಮನೆ ಮತ್ತು ವಿನೋದಿನಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಸಿಎ| ಹರಿದಾಸ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  ಎ.ಪಿ.ಕೆ ಪೋತಿ ವಂದನಾರ್ಪಣೆ ಗೈದರು.