ಮುಂಬಯಿ,ಸೆ. 04: ಗಾಣಿಗ ಸಮಾಜ ಮುಂಬಯಿ (ಜಿಎಸ್‍ಎಂ) ಇದರ ಪದಾಧಿಕಾರಿಗಳು ಜಿಎಸ್‍ಎಂ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಮುಂದಾಳುತ್ವದಲ್ಲಿ ಕಳೆದ ರವಿವಾರ (ಸೆ.01) ದಾನಶೀಲ ಕಾರ್ಯಕ್ರಮವನ್ನಾಗಿಸಿ ಬೊರಿವಲಿ ಪಶ್ಚಿಮದ ಗೋರಯ್ ಅಲ್ಲಿನ ಮದರ್ ತೆರೆಜಾ ಶಾಂತಿಧಾನ್ ಅನಾಥಾಶ್ರಮಕ್ಕೆ ಭೇಟಿಯನ್ನೀಡಿತು.
ಸುಮಾರು 200 ಆಶ್ರಮವಾಸಿ ನಿರಾಶ್ರಿತರಿಗೆ, ಅಂಗವಿಕಲರಿಗೆ, ಬುದ್ಧಿಮಾಂದ್ಯ ಮಕ್ಕಳಿಗೆ ಸಂತ ಮದರ್ ತೆರಸ ಅವರ ಶಾಂತಿದಾನ್ ವರದಾನವಾಗಿ ದಶಕಗಳಿಂದ ಸೇವಾ ನಿರತ ಸಂಸ್ಥೆಯಾಗಿದ್ದು, ಅಪರಾಹ್ನದ ಊಟ, ಸಂಜೆ ಕಾಫಿ, ಚಹಾ ತಿಂಡಿ ಮತ್ತು ರಾತ್ರಿ ಊಟದ ವರೆಗಿನ ಖರ್ಚು ವೆಚ್ಚವನ್ನು ಚೆಕ್ ಮೂಲಕ ನೀಡಿ, ಸಂಘದ ಸಮಾಜ ಸೇವಾ ಅಭಿಯಾನವನ್ನು ಮುಂದುವರಿಸಿದರು.
ಜಿಎಸ್‍ಎಂ ಸಂಘದ ಸದಸ್ಯರಾದ ಹಿರಿಯ ಯು. ಬಾಲಚಂದ್ರ ಕಟಪಾಡಿ, ಮಾಜಿ ಕಾರ್ಯದರ್ಶಿ ಚಂದ್ರಶೇಖರ್ ಆರ್ . ಗಾಣಿಗ, ಪ್ರದಾನ ಕಾರ್ಯದರ್ಶಿ ಗಂಗಾಧರ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ರಾವ್ ಚೆಂಬೂರ್, ಸಮಿತಿ ಸದಸ್ಯ ನಾಗರಾಜ್.ಎಂ. ಗಾಣಿಗ ಹಾಗೂ ಯುವ ಸದಸ್ಯ ನಿತೀಶ್ ವಿ. ರಾವ್ ಅವರು ಉಪಸ್ಥಿತರಿದ್ದರು.