ವರದಿ / ರೋನ್ಸ್ ಬಂಟ್ವಾಳ

ಮುಂಬಯಿ: ಥಾಣೆ ಇಲ್ಲಿನ ವಿ ಕೇರ್ ವೆಲ್ಫೇರ್ ಅಸೋಸಿಯೇಶನ್ (ಎನ್‍ಜಿಒ) ಮಹಾರಾಷ್ಟ್ರದ ಪ್ರತಿಷ್ಠಿತ ಮ್ಯಾಜಿಕಲ್ ಚಾರ್ಮಂಟ್ ಜೊತೆಗೆ ಮುದ್ರಣ ಮಾಧ್ಯಮ ಪಾಲುದಾರ ಲೋಕಮತ್ ಮತ್ತು ಸಮುದಾಯ ಪಾಲುದಾರ ಲೋಕಮತ್ ಸಖಿ ಮಂಚ್ ಜೊತೆಗೆ ಪ್ರಮಾಣೀಕೃತ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಣಿಕರ್ಣಿಕಾ 2024 ಜೊತೆಗೆ ಇತ್ತೀಚೆಗೆ (ನ.19) ವೈ.ಬಿ ಚವ್ಹಾಣ್ ಕೇಂದ್ರ ಮುಂಬಯಿ ಇಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಮೋಹಿನಿ ಪೂಜಾರಿ ಅವರಿಗೆ "ಸ್ಟಾರ್ಟ್ ಅಪ್ ಮಹಿಳಾ ಉದ್ಯಮಿ-ಮಣಿಕರ್ಣಿಕಾ ಪ್ರಶಸ್ತಿ 2024" ಪ್ರದಾನಿಸಿ ಅಭಿನಂದಿಸಿತು.

ವಿ ಕೇರ್ ವೆಲ್ಫೇರ್ ಅಸೋಸಿಯೇಶನ್ (ಎನ್‍ಜಿಒ) ಸಾಮಾಜಿಕ ಸಂಸ್ಥೆಯಾಗಿದ್ದು, ಶಿಕ್ಷಣ, ಕ್ರೀಡೆ, ನಿರುದ್ಯೋಗ, ವೈದ್ಯಕೀಯ, ಅಂಗವಿಕಲತೆ ಮತ್ತು ಇತರ ಕ್ಷೇತ್ರಗಳಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನ್ಯಾಯ ಒದಗಿಸಲು ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕಳೆದ 13 ವರ್ಷಗಳಲ್ಲಿ, ರೋಗಿಗಳಿಗೆ ವೈದ್ಯಕೀಯ ನೆರವು ನೀಡಿದೆ. ನಿರುದ್ಯೋಗಿಗಳು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಉದ್ಯಮವನ್ನು ಪ್ರಾರಂಭಿಸಲು ಮತ್ತು ಈ ಸಂಸ್ಥೆಯ ಮೂಲಕ ಸ್ಟಾರ್ಟ್ ಅಪ್ ಮಹಿಳಾ ಉದ್ಯಮಿ ಮೋಹಿನಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.