ಮುಂಬಯಿ (ಆರ್‍ಬಿಐ), ಸೆ.27: ಬೆಂಗಳೂರು ಇಲ್ಲಿನ ಹೊಟೇಲ್ ಫೋಕ್ಷೋವಿವ್ ಇಂಟರ್‍ನ್ಯಾಷನಲ್ ಇಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಮಿಸ್ಟರ್ ಎಂಡ್ ಮಿಸ್ ಟೀನ್ ಕರ್ನಾಟಕ  ಸ್ಫರ್ಧೆಯಲ್ಲಿ  ಬಾರಕೂರು ಹನೆಹಳ್ಳಿಯ  ರೇಷ್ಮಾ ಟೀನಾ  ರೋಡ್ರಿಗಸ್  ಗ್ರ್ಯಾಂಡ್ ಫಿನಾಲೆಯಲ್ಲಿ  ಮಿಸ್ ಟೀನ್  ಫ್ರೇಶ್  ಫೇಸ್  ಆಗಿ ಮೂಡಿ ಬಂದಳು .

ಈಗಾಗಲೆ ಹಲವಾರು ಕಡೆ ರೂಪದರ್ಶಿಯಾಗಿ  ಮುಗ್ದ ನಗುವಿನಿಂದ  ಮನಗೆಲ್ಲುವ ಈಕೆ ಮಿಸ್ ಟೀನ್ ಸ್ಪರ್ಧೆಯಲ್ಲಿ ಸಾಂಪ್ರದಾಯಕ ಉಡುಗೆ ಮತ್ತು ಆಧುನಿಕ ಉಡುಗೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿ ವಿಜೇತಳಾಗಿರುತ್ತಾಳೆ .

ಮಂಗಳೂರು ಕಂಕನಾಡಿ ಫಾದರ್ ಮುಲ್ಲಾರ್ ಇಲ್ಲಿ  ಪ್ರಥಮ  ಬಿಎಸ್‍ಸಿ ನರ್ಸಿಂಗ್  ವಿದ್ಯಾರ್ಥಿನಿ ಆಗಿರುವ ಈಕೆ ಉಡುಪಿ ಜಿಲ್ಲೆ  ಬಾರಕೂರು ಹನೆಹಳ್ಳಿಯ  ಟೀನಾ ರೋಡ್ರಿಗಸ್  ಮತ್ತು ಮ್ಯಾಕ್ಷಿ ಪಿಂಟೋ ದಂಪತಿ ಸುಪುತ್ರಿ ಆಗಿದ್ದಾಳೆ .

ವರದಿ /ಚಿತ್ರ -  Rons Bantwal