ನನ್ನಮ್ಮ ಸಾವಿತ್ರಿ ಎನ್ನ ಸಲಹಿದ ಮಾತೆ

ಭಿನ್ನತೆಯ ತೋರದಿಹ ವಾತ್ಸಲ್ಯದಾತೆ

ಹೊನ್ನಿಗಿಂತಲು ಮಿಗಿಲು ಎನ್ನುವೆನು ನಾನವಳ

ಚೆನ್ನು ನೆನೆಯುತಲಿಂದು ಧೀರತಮ್ಮ

ಹೆತ್ತಮ್ಮ  ಎಂದೆಂದು ತುತ್ತ ತುದಿಯಲಿ ಇರುವ

ಕತ್ತ ಮೇಲಣ ಶಿರದ ತೆರದಿ ಇಹರು

ಚಿತ್ತದಲಿ ನಿತ್ಯವೂ ಬಿತ್ತುವುದು ನೆನಪನ್ನು

ಸತ್ತಿಲ್ಲವೆನುವಂತೆ ಧೀರತಮ್ಮ

ಡಾ ಸುರೇಶ ನೆಗಳಗುಳಿ

ಮುಕ್ತಕ - ನನ್ನಮ್ಮ