ಬುಕ್ಕು ಬಳಪ ಎತ್ತಿಕೊಂಡು ಬ್ಯಾಗು ಬುತ್ತಿ ತುಂಬಿಕೊಂಡು 

ಸಮವಸ್ತ್ರ ಧರಿಸಿಕೊಂಡು ಮಕ್ಕಳು ನಲಿಯುತ್ತಾ ನಡೆದರು 

ಇಂದಿನಿಂದ ಶಾಲೆ ಶುರು

ಬೆಂಚು ಡೆಸ್ಕು ಹಾರಿಕೊಂಡು

ಮಿತ್ರರ ಪರಿಚಯ ಮಾಡಿಕೊಂಡು

ಕಲಿಕೆಗೆ ತಮ್ಮನ್ನು ತೆರೆದುಕೊಂಡು

ಜ್ಞಾನಾರ್ಜನೆಗೆ ಕೂತರು

ಇಂದಿನಿಂದ ಶಾಲೆ ಶುರು


ಶಿಕ್ಷಕರೆಲ್ಲ ಎದುರ್ಗೊಂಡು

ಸಂಭ್ರಮಾಚರಣೆ ಮಾಡಿಕೊಂಡು

ಶಿಸ್ತಿಗೆ ಎಲ್ಲರ ಒಡ್ಡಿಕೊಂಡು

ಮಕ್ಕಳ ಭವಿಷ್ಯ ಬರೆದರು

ಇಂದಿನಿಂದ ಶಾಲೆ ಶುರು.


 ವಿತೊರಿ, ಕಾರ್ಕಳ