ಕಾಂಗ್ರೆಸ್ ಪಕ್ಷವು ವಿ. ಎಸ್. ಉಗ್ರಪ್ಪ ನೇತೃತ್ವದಲ್ಲಿ ರಚಿಸಿದ್ದ ಸತ್ಯ ಶೋಧನಾ ಸಮಿತಿಯು ಕೆಪಿಸಿಸಿಗೆ 31 ಪುಟಗಳ ವರದಿ ಸಲ್ಲಿಸಿದ್ದು, ಮೈಸೂರು ಸಾಮೂಹಿಕ ಅತ್ಯಾಚಾರದ ಹೊಣೆ ಬಿಜೆಪಿ ಸರಕಾರದ್ದು ಮತ್ತು ಪೋಲೀಸರದು ಎಂದು ಹೇಳಿದೆ.
ಸರಿಯಾದ ಪೋಲೀಸು ಗಸ್ತು ಇರಲಿಲ್ಲ. ಜನರು ನೀಡಿರುವ ಹೇಳಿಕೆಯಂತೆ ಪೋಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ರಿಯಲ್ ಎಸ್ಟೇಟ್ ತಕರಾರು ತೀರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸರಕಾರವು ಬೇಕಾಬಿಟ್ಟಿ ಪೋಲೀಸರ ವರ್ಗಾವಣೆ ಮಾಡಿದೆ. ಸೂಕ್ತ ಸಹ ವ್ಯವಸ್ಥೆ ಮಾಡಿಲ್ಲ. ಪೋಲೀಸು ಮತ್ತು ಇತರ ಇಲಾಖೆಗಳ ನಡುವೆ ಸಮನ್ವಯ ಇರಲಿಲ್ಲ. ಅಲ್ಲದೆ ಸ್ಥಳೀಯ ಬಿಜೆಪಿಯ ಸಂಸದ, ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರ ನಡುವೆಯೂ ಸಮನ್ವಯ ಇರಲಿಲ್ಲ. ಸಾಮೂಹಿಕ ಅತ್ಯಾಚಾರಕ್ಕೆ ಈ ಎಲ್ಲ ಅಂಶಗಳು ಕಾರಣವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.