ನಮ್ಮ ಮನೆಯಲ್ಲಿ ಇದ್ದ ನಂದಿಬಟ್ಟಲು ಹೂವು ದಪ್ಪಗಿತ್ತು. ಮಂಗಳೂರಿನಲ್ಲಿ ತೆಳು ಹೂವಿನ ಇದನ್ನು ಕಂಡಾಗ ಮೊದಲು ಸ್ವಲ್ಪ ಸಂಶಯ ಆಯ್ತು.  ಇದು ತೆಂಕಣ ಏಶಿಯಾದ ಹೂವು. ಭಾರತದಲ್ಲಿ ಮುಖ್ಯವಾಗಿ ಅಸ್ಸಾಂ, ಪಡುವಣ ಬಂಗಾಳಗಳಲ್ಲಿ ಹೆಚ್ಚು ಬೆಳೆಯುತ್ತದೆ.

ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಪಿನ್ ವ್ಹೀಲ್ ಹೂ ಎಂದರೂ ರೋಸ್ ಬೆ ಇತ್ಯಾದಿ ಹೆಸರುಗಳೂ ಇವೆ.

ಇದು ಸದಾ ಹಸಿರು ಪೊದೆ ಗಿಡ. ಮಲ್ಲಿಗೆ ಜಾತಿಗೆ ಸೇರಿದ್ದಲ್ಲ. ಟೇಬರ್ನಾ ಮೊಂಟಾನಾ ಜಾತಿಗೆ ಸೇರಿದೆ. ಎಲೆಗಳು ಕಡು ಹಸಿರು ಇರುತ್ತವೆ.

ಕಾಂಡದಲ್ಲಿ ಬಿಳಿ ಸೊನೆ ಇರುತ್ತದೆ. ಇದರ ಬೇರು ಹಲ್ಲುನೋವು, ತರಚು ಗಾಯಕ್ಕೆ ಬಯ್ದ್ಯ ಮದ್ದಾಗಿದೆ.

ಹಾವು ಕಚ್ಚಿದಾಗ ಇದರ ಬೇರನ್ನು ಅರೆದು ಮೂಗಿನ ಹೊಳ್ಳೆಗೆ ಬಿಡುತ್ತಾರೆ. ಇದರಲ್ಲಿ ನನಗೆ ನಂಬಿಕೆ ಇಲ್ಲ.ಶಿವ ಪೂಜೆಯಲ್ಲಿ ಈ ಹೂವಿಗೆ ಆದ್ಯತೆ ಇದೆ.

Article By

- Perooru Jaru