ಧನ್ವಂತರಿ (Sanskrit: धन्वंतरी; ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಅವತಾರ. ವೇದ ಹಾಗು ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯ ಕುರಿತು ಪ್ರಾರ್ಥನೆ ಮಾಡುವುದು ಸಾಮಾನ್ಯ.

ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗು ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ. ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ ) ಧನು+ಏವ+ಅಂತಃ+ಅರಿ=ಧನ್ವಂತರಿ(ಸರ್ಜನ್), ೨)ಧನುಷಾ+ತರತೇ+ತಾರಯತೇ+ಪಾಪಾತ್=ಧನ್ವಂತರಿ(ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.

ನಮಾಮಿ ಧನ್ವಂತರಿಯಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್ವಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮೃತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.

ಆಯುರ್ವೇದದ ದೃಷ್ಟಿಯಿಂದ ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿಯು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ (ಆಯುರ್ವೇದದ ದೇವತೆ) ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಹಂಚುತ್ತಾರೆ. ಇದರಲ್ಲಿ ಬಹುದೊಡ್ಡ ಅರ್ಥವಿದೆ. ಬೇವು ಅಮೃತದಿಂದ ಉತ್ಪನ್ನವಾಗಿದೆ. ಧನ್ವಂತರಿಯು ಅಮೃತ ತತ್ತ್ವವನ್ನು ಕೊಡುವವನಾಗಿದ್ದಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರತಿದಿನ ಬೇವಿನ ಐದಾರು ಎಲೆಗಳನ್ನು ತಿಂದರೆ ರೋಗಗಳು ಬರುವ ಸಂಭವವೇ ಕಡಿಮೆಯಾಗುತ್ತದೆ. ಬೇವಿಗೆ ಇಷ್ಟೊಂದು ಮಹತ್ವವಿರುವುದರಿಂದ ಈ ದಿನ ಅದನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ.

ಸಾಮಾನ್ಯವಾಗಿ ಭಗವಂತನಿಗೆ ಹತ್ತು ಅವತಾರಗಳು ಎಂದು ಹೇಳುವುದಿದೆ. ಇದು ಈ ವೈವಸ್ವತ ಮನ್ವಂತರದ ದಶಾವತಾರಗಳು. ಹಿಂದಿನ ಮನ್ವಂತ ರದ್ದೂ ಸೇರಿದಂತೆ ವೇದವ್ಯಾಸ, ಕಪಿಲ, ಮಹೀದಾಸ, ದತ್ತಾತ್ರೇಯ ಒಟ್ಟು 23 ಅವತಾರಗಳನ್ನು ಹೆಸರಿಸಲಾಗುತ್ತದೆ. ಇದ ರಲ್ಲಿ ಆಯುರ್ವೇದ ಪ್ರವರ್ತಕನೆನಿಸಿದ ಧನ್ವಂತರಿ ಅವತಾರವೂ ಒಂದು.

16 ಜನರ ಸ್ಮರಣೆಯಿಂದ ರೋಗಹರ

“ಧನ್ವಂತರಿರ್ದಿವೋದಾಸಃ ಕಾಶೀರಾ ಜೋ ಶ್ವಿ‌ನೀ ಸುತೌ| ನಕುಲಃ ಸಹದೇ ವೋ ರ್ಕಿಃ ಚ್ಯವನೋಜನಕೋ ಬುಧಃ| ಜಾಬಾಲೋ ಜಾಜಲಿಃ ಪೈಲಃ ಕರಥಃ ಅಗಸ್ತ್ಯ ಏವ ಚ| ಏತೇ ವೇದಾಂಗ ವೇದಜ್ಞಃ ಷೋಡಶ ವ್ಯಾಧಿನಾಶಕಾಃ|| ಈ 16 ಜನರನ್ನು ನಿತ್ಯ ಸ್ಮರಿಸಿದರೆ ರೋಗ ನಿವಾರಣೆಯಾಗುತ್ತದೆ ಎಂಬ ಮಾತು ಪುರಾಣಗಳಲ್ಲಿದೆ. ಇದರಲ್ಲಿ ಮೊದಲು ಇರುವುದೇ ಧನ್ವಂತರಿ ಮತ್ತು ದಿವೋದಾಸರ ಹೆಸರು.

ಪುರಾಣಗಳಲ್ಲಿ ಬರುವ ಧನ್ವಂತರಿ ಐತಿ ಹಾಸಿಕವಾಗಿ ಮತ್ತೂಮ್ಮೆ ಅವತರಿಸಿದ್ದು ಆಯುರ್ವೇದದ ಇತಿಹಾಸದಲ್ಲಿ ಕಂಡು ಬರುತ್ತದೆ. ಎರಡನೆಯ ಬಾರಿಗೆ ಜನಿಸಿದ ಧನ್ವಂತರಿ ಕಾಶೀರಾಜನಾದ ದಿವೋದಾಸ.

ಉತ್ತರ -ದಕ್ಷಿಣದ ವ್ಯತ್ಯಾಸ

ದಿವೋದಾಸ ಧನ್ವಂತರಿ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ ಜನಿಸಿದ. ಉತ್ತರ ಭಾರತದಲ್ಲಿ ಧನ್ವಂತರಿ ಜಯಂತಿಯನ್ನು ಧನತ್ರಯೋದಶಿ = ಧನ್‌ ತೆರಾಸ್‌ ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ ಕಾರ್ತಿಕ ಮಾಸ ಆರಂಭವಾಗುವುದು ಹುಣ್ಣಿಮೆಯ ಮರುದಿನದಿಂದ, ದಕ್ಷಿಣ ಭಾರತದಲ್ಲಿ ಕಾರ್ತಿಕ ಮಾಸ ಆರಂಭವಾಗುವುದು ಅಮಾ ವಾಸ್ಯೆಯಿಂದ. ಹೀಗಾಗಿ ಉತ್ತರ ಭಾರತದಲ್ಲಿ ಧನತ್ರಯೋದಶಿ ಆಚರಣೆಯಾಗಿದೆ. ಇದು ಗುಜರಾತಿನಲ್ಲಿ ಹೆಚ್ಚು ಪ್ರಚಲಿತ. ಕೇಂದ್ರ ಆಯುಷ್‌ ಇಲಾಖೆ ಈ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವಾಗಿ 2016ರಿಂದ ಆಚರಿಸುತ್ತಿದೆ. ಇದು ದೀಪಾವಳಿಯ ಹಬ್ಬದ ನಡುವಿನ ತ್ರಯೋದಶಿಯಂದು ಘಟಿಸುತ್ತದೆ.

ಅಷ್ಟಾಂಗಯೋಗದ ಪ್ರವರ್ತಕ

ಪುರಾಣದಲ್ಲಿ ಮೊದಲಾಗಿ ಕಂಡುಬರುವುದು ಅಮೃತ ಕಲಶವನ್ನು ತರುವ ಧನ್ವಂತರಿ. ಇದು ನಡೆಯುವುದು ಸಮುದ್ರಮಥನ ಕಾಲದಲ್ಲಿ. ಹೀಗಾಗಿ ಅಬ್ಜ ಧನ್ವಂತರಿ ಎಂದು ಕರೆಯುತ್ತಾರೆ. ಅಬ್ಜ= ಸಮುದ್ರ, ನೀರು. ಧನ್ವ= ರೋಗ, ತರಿ= ದಾಟಿಸುವವ, ಈ ಅರ್ಥದಲ್ಲಿ ರೋಗ ನಿರ್ಮೂಲನ ಮಾಡುವವ ಎಂಬುದಾಗಿದೆ. ಅಮೃತ ಕಲಶ ತಂದಾಗ ದೈತ್ಯರು ಕೊಂಡೊಯ್ಯುತ್ತಾರೆ. ಆಗಲೇ ಭಗವಂತ ಮೋಹಿನಿ ಅವತಾರದಲ್ಲಿ ಬಂದು ಸಮಸ್ಯೆ ನಿವಾರಿಸುತ್ತಾನೆ. ದಿವೋದಾಸ ಧನ್ವಂತರಿ ತಾನು ಹಿಂದೆ ಒಮ್ಮೆ ಅವತರಿಸಿದ್ದೆ ಎಂದು ಹೇಳುವುದು ಪುರಾಣ ಕಥನದ ಕೊಂಡಿಯನ್ನು ಸಮರ್ಥಿಸುವಂತಿದೆ. ಪುರಾಣ ಕಾಲದ ಧನ್ವಂತರಿಯೂ ಕಾಯ ಚಿಕಿತ್ಸಾ (ಮೆಡಿಸಿನ್‌), ಕೌಮಾರ (ಬಾಲ ವಿಭಾಗ), ಶಲ್ಯ (ಸರ್ಜರಿ), ಶಾಲಕ್ಯ (ಇಎನ್‌ಟಿ, ಕಣ್ಣು), ಅಗದ (ವಿಷ ಚಿಕಿತ್ಸೆ), ಭೂತವಿದ್ಯಾ (ಮನೋರೋಗ, ಮನಃಶಾಸ್ತ್ರ), ರಸಾಯನ (ಆರೋಗ್ಯವರ್ಧನ), ವಾಜೀಕರಣ (ಸರಸಜೀವನ ಉತ್ತೇಜನ) ಹೀಗೆ ಅಷ್ಟಾಂಗಯೋಗವನ್ನು ಪ್ರವರ್ತಿಸಿದ ಎಂಬ ಸಂಕ್ಷಿಪ್ತ ವಿವರಣೆ ಇದೆ.

6 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಶುಭಾಶಯಗಳು

( ವಿವಿದ ಮೂಲಗಳಿಂದ ಸಂಗ್ರಹ )

ಡಾ. ವಾಣಿಶ್ರೀ ಕಾಸರಗೋಡು