ನೆಲ್ಲಿತೀರ್ಥ:  ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸೋಮನಾಥೇಶ್ವರ ದೇವಸ್ಥಾನ ನೆಲ್ಲಿತೀರ್ಥ ಇಲ್ಲಿಗೆ ಬೇಟಿ ನೀಡಿ ಗುಹ ತೀರ್ಥಸ್ನಾನ ಗೈದರು ಅವರನ್ನು ದೇವಳದ ವತಿಯಿಂದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ಭಟ್‌ ರವರು ಸ್ವಾಗತಿಸಿ ಗೌರವಿಸಿದರು.

ತೀರ್ಥಸ್ನಾನ ಮಾಡಿದ ಶ್ರೀಪಾದರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ಭಟ್‌ ನೆಲ್ಲಿತೀರ್ಥ, ಅರ್ಚಕರದ ಗಣಪತಿ ಭಟ್‌ ನೆಲ್ಲಿತೀರ್ಥ, ವೇದಮೂರ್ತಿ ವಸಂತ ಭಟ್‌‌ ನೆಲ್ಲಿತೀರ್ಥ,ಡಾ. ವಾಧೀಶ್ ಭಟ್ ನೆಲ್ಲಿತೀರ್ಥ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ದೀಪ್ ಕಿರಣ್ ಸಾಲ್ಯಾನ್ ಕರಂಬಾರ್, ಭಕ್ತವರ್ಗ ಹಾಗೂ ದೇವಳದ ಸಿಬ್ಬಂದಿವರ್ಗ ಹಾಜರಿದ್ದರು.