ಬೆಳ್ತಂಗಡಿ, ಸೆ.09.: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಸಂಯುಕ್ತಾಶ್ರಯದಲ್ಲಿ ನಡೆದಗ್ರಾಮ ಸಮಿತಿ ಸಭೆಯನ್ನುಗ್ರಾಮ ಪಂಚಾಯತ್‍ ಉಪಾಧ್ಯಕ್ಷರಾದ ಶ್ಯಾಮಲ ರವರು ದೀಪ ಉದ್ದೀಪನ ಮಾಡಿ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾೈಸ್‍ರವರು ಮಾತನಾಡಿ ಸಣ್ಣ ಮತ್ತುಅತಿ ಸಣ್ಣರೈತರ ಸಾಮಥ್ರ್ಯವರ್ಧನೆಗೆಂದು ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಇಂದು ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲೊಂದಾಗಿ ಮೂಡಿ ಬಂದಿದೆ. ದುಶ್ಚಟ ಮುಕ್ತ ಸಮಾಜವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿಯ ಮುಖೇನ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ, ಇದಕ್ಕಾಗಿ ಸಮಾಜದಗಣ್ಯರ ಸಹಭಾಗಿತ್ವವುಳ್ಳ ಜನಜಾಗೃತಿಕಾರ್ಯಕ್ರಮದ ಹುಟ್ಟು, ಬೆಳವಣಿಗೆ, ರೂಪುರೇμÉ, ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ನವಜೀವನ ಸಮಿತಿ ಪುನಶ್ಚೇತನ-ಬಲವರ್ಧನೆ, ನವಜೀವನ ಸದಸ್ಯರಿಗೆ ಸ್ವಉದ್ಯೋಗತರಬೇತಿ, ನವಜೀವನ ಮಾಸಿಕ ಸಭೆ, ಪಾನಮುಕ್ತ ಸಂಘ, ಪಾನಮುಕ್ತ ಒಕ್ಕೂಟ, ಪಾನಮುಕ್ತ ಗ್ರಾಮ ಸಮಿತಿ ಮತ್ತುದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡಲು ಪೂಜ್ಯರಕನಸನ್ನು ನಡೆಸುವ ಕಾರ್ಯಕ್ರಮ ಇದು ಒಂದಾಗಿದೆ ಎಂದರು,

ಗ್ರಾಮ ಸಮಿತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸಮಿತಿ ಅಧ್ಯಕ್ಷರಾಗಿ ಗಿರೀಶ್, ಉಪಾಧ್ಯಕ್ಷರಾಗಿ ಜಿನ್ನಪ್ಪ ಗೌಡ ಮತ್ತು ಪ್ರಶಾಂತ್ ಜಿ. ಕಿಟ್ಟ ಕೈರೋಲಿ, ಕಾರ್ಯದರ್ಶಿ ಭಾರತಿ, ಹಾಗೂ ಗೌರವ ಸಲಹೆಗಾರರಾಗಿ ಶ್ಯಾಮಲ ಗ್ರಾಮ ಪಂಚಾಯತ್‍ ಉಪಾಧ್ಯಕ್ಷರು, ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ಕೊರಗಪ್ಪ ಗೌಡ, ಮೋಹನ್ ಪೂಜಾರಿಗ್ರಾಮ ಪಂಚಾಯತ್ ಸದಸ್ಯರು, ಮೋನಪ್ಪ ನಿಡ್ಲೆ, ನಾರಾಯಣ ಎಂ ಕೆ, ರವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಜನಜಾಗೃತಿ ಯೋಜನಾಧಿಕಾರಿಗಳು ಮೋಹನ್ ಕೆ, ತಿಮ್ಮಯ್ಯ ನಾಯ್ಕ,ಒಕ್ಕೂಟದಅಧ್ಯಕ್ಷರು ಪದಾಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಪದಾಧಿಕಾರಿಗಳು, ವಿಪತ್ತು ನಿರ್ವಹಣಾತಂಡದ ಸದಸ್ಯರು, ಭಾಗವಹಿಸಿರುತ್ತಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಶಿಬಿರಾಧಿಕಾರಿ ದೇವಿಪ್ರಸಾದ್ ನಡೆಸಿ, ವಲಯದ ಮೇಲ್ವಿಚಾರಕರಾದ ಪ್ರಶಾಂತ್ ಸ್ವಾಗತಿಸಿ, ಸೇವಾಪ್ರತಿನಿಧಿ ರಮ್ಯರವರು ವಂದಿಸಿದರು.