ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ 74ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ದಲ್ಲಿ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಜರಗಲಿರುವುದು. ಈ ಪ್ರಯುಕ್ತ ಶ್ರೀ ದೇವರ ಮ್ರಿತಿಕೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ಗುರುವಾರ ದಂದು ತರಲಾಯಿತು. ಶುಕ್ರವಾರ ಬೆಳೆಗ್ಗೆ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆಯು ದೀಪ ಬೆಳಗಿಸುವುದರ ಮುಖೇನ ಚಾಲನೆ ನೀಡಲಾಯಿತು
ಬಳಿಕ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆ, ಗಣಹೋಮ ರಾತ್ರಿ ಮೂಡಗಣಪತಿ ಸೇವೆ , ರಂಗ ಪೂಜೆ ಬಳಿಕ ಮಂಗಳಾರತಿ ನಡೆಯಲಿದೆ. ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆಯಲಿದ್ದು , ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಪ್ರಕಾರ ಎಲ್ಲ ರೀತಿಯಲ್ಲಿ ನಿಯಮ ಪಾಲಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದ್ರೆಯಾಗದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ರಘುವೀರ್ ಕಾಮತ್, ವಿನೋದ್ ಶೆಣೈ, ಜೀವನರಾಜ್ ಶೆಣೈ, ಸತೀಶ್ ಪ್ರಭು, ಸುರೇಶ ಕಾಮತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ