10 ದಿನಗಳ ದಶ ಲಕ್ಷಣ ಮಹಾ ಪರ್ವ ಜೈನ ರ ಪ್ರಾಚೀನ ಹಬ್ಬವಾಗಿದ್ದು ಜಗತ್ತಿನ ಪ್ರಾಚೀನ ಮಹಾ ಪರ್ವಗಳಲ್ಲಿ ಒಂದೆoದು ಪ್ರಸಿದ್ಧವಾಗಿದೆ ದಿನಾಂಕ 10.9.21 ರಂದು ಇಂದು ಶ್ರೀ ಜೈನ ಮಠ ಮೂಡು ಬಿದಿರೆ ಯಲ್ಲಿ ಬೆಳಿಗ್ಗೆ 6.45ರಿಂದ ಅಭಿಷೇಕ ಪೂಜೆ ನೆರವೇರಿದ ನಂತರ ಚಾತುರ್ಮಾಸ ನಿರತ ಪ. ಪೂ 108ದಿವ್ಯ ಸಾಗರ ಮುನಿ ರಾಜರು ಉತ್ತಮ ಕ್ಷಮೆ ಕೋಟಿ ಧ್ಯಾನ ಮಾಡುದಕ್ಕಿಂತ ಹೆಚ್ಚು ಶ್ರೇಷ್ಠ ಕ್ಷಮೆ ಧಾರಣೆ ಮಾಡುದರಿಂದ ತೀರ್ಥ0ಕರರಾಗಬಹುದು ವಾರಾಣಸಿಯ ರಾಜಕುಮಾರ ಪಾರ್ಶ್ವನಾಥರು ಕ್ಷಮೆ ಧಾರಣೆ ಮಾಡಿ ಶ್ರೇಷ್ಠ ಸ್ಥಾನ ಪಡೆದು ಭಗವoತ ರಾದರು ದೃತರಾಷ್ಟ್ರ ಕ್ರೋದದಿಂದ ಬೀಮಾ ಅಕೃತಿಯ ಕಂಚಿನ ಪ್ರತಿಮೆ ಯನ್ನು ಅಲಿಂಗನದ ನೆಪ ಒಡ್ಡಿ ಪುಡಿ ಪುಡಿ ಮಾಡಿದರು ಕ್ರೋದದಿಂದ ಮಾನ ಹಾನಿ ಕ್ಷಮೆಯಿಂದ ಉನ್ನತಿ ಎಂದು ನುಡಿದರು.

ಷೋಡಶ ಕಾರಣ ಭಾವನೆ ಪೂಜೆ, ದಶಲಕ್ಷಣ ಪೂಜೆ ಬಳಿಕ ತತ್ತ್ವಾರ್ಥ ಸ್ತೋತ್ರ ಪಠಣವನ್ನು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ನೆರವೇರಿಸಿದರು.

ಬೆಳಿಗ್ಗೆ 9.00 ಕ್ಕೆ ಗುರು ಬಸದಿ ಯ ಪಾರ್ಶ್ವನಾಥ ಸ್ವಾಮಿ 24 ತೀರ್ಥ0ಕರ ಬಸದಿ ಅಮ್ಮ ನವರ ವಿಶೇಷ ಅಂತಿಮ ಶುಕ್ರವಾರ ಪೂಜೆ ಯಲ್ಲಿ ಪಾಲ್ಗೊಂಡರು.10.9.21ರಿಂದ 19.9.21 ರವರೆಗೆ ದಶ ಲಕ್ಷಣ ಪೂಜೆ ಶ್ರೀ ಮಠ ದಲ್ಲಿ ನೆರ ವೇರುತ್ತಿದ್ದು ನಾಳೆ ಮೂಡು ಬಿದಿರೆ ಗುರು ಬಸದಿ ಯಲ್ಲಿ, 11.9.20 ರಿಂದ 20.9.20 ರವರೆಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿ ಯಲ್ಲಿ ಸಂಬಂಧ ಪಟ್ಟ ವ್ರತಿ ಕರ ಸಹ ಬಾಗಿತ್ವದಲ್ಲಿ

ಪ್ರತೀ ದಿನ 2.00ರಿಂದ ಅಭಿಷೇಕ, ದಶಲಕ್ಷಣ ನೋಂಪಿ ಪೂಜೆ ಅಪರಾಹ್ನ 2.15ರಿಂದ 3.00 ರವರೆಗೆ ನಡೆಯಲಿದೆ. ಭಕ್ತಾಧಿಗಳು jainkashi moodabidire, Om sriji /spiritual Devotion ಫೇಸ್ಬುಕ್ ಪೇಜ್ ಮೂಲಕ ಪೂಜಾ, ಪ್ರವಚನ ನೋಡಲು ನೇರ ಪ್ರಸಾರ ಅವಕಾಶ ಕಲ್ಪಿಸಲಾಗಿದೆ ಪ್ರತಿದಿನ ಬೆಳಿಗ್ಗೆ 7.00 ರಿಂದ 8.35 ರ ವರೆಗೆ ನೇರ ಲೈವ್ ಕಾರ್ಯಕ್ರಮ ವೀಕ್ಷಿಸ ಬಹುದಾಗಿದೆ.

ಪಟ್ಣ ಶೆಟ್ಟಿ ಸುದೇಶ್ ಕುಮಾರ್ ಇಂದಿನ ಪೂಜಾ ಸೇವಾ ದಾತರ ದಿನೇಶ್ ಕುಮಾರ ಬೆಟ್ಕೇರಿ, ಸಂಜಯಂಥ ಕುಮಾರ, ದೇವೇಂದ್ರ ಪಾಟೀಲ್, ಸನತ್ಕುಮಾರ್ ದಂಪತಿಗಳು ಉಪಸ್ಥಿತರಿದ್ದರು