ನಿನ್ನೆ ಮಧ್ಯಾಹ್ನ 2.30 ಗಂಟೆಗೆ ರಾಜ ಭವನದಲ್ಲಿ 20 ಮಂದಿ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಎಲ್ಲ ಏರ್ಪಾಡು ಆಗಿತ್ತು. ಆದರೆ ಗುಜರಾತ್ ಬಿಜೆಪಿಯಲ್ಲಿ ಎಲ್ಲ ಸರಿ ಇಲ್ಲದ್ದರಿಂದ ದಿಡೀರನೆ ಸಮಾರಂಭ ರದ್ದಾಗಿ, ಬೋರ್ಡ್ ಇಳಿದಿದೆ, ಇಂದಿಗೆ ಬೋರ್ಡ್ ಸಿದ್ಧವಾಗಿದೆ.

ಹೊಸ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಹಿಂದಿನ ಮುಖ್ಯಮಂತ್ರಿ ವಿಜಯ ರೂಪಾನಿಯವರ ಸಂಪುಟದ ಎಲ್ಲರನ್ನೂ ಕೈಬಿಟ್ಟು ಹೊಸ ಮಂತ್ರಿಗಳನ್ನು ಆರಿಸಿಕೊಂಡಿದ್ದರು. ಹಳಬರು ಮತ್ತು ಅವರ ಬೆಂಬಲಿಗರು ಬಂಡೆದ್ದಿರುವುದರಿಂದ ಗುಜರಾತ್ ಹೊಸ ಮಂತ್ರಿ ಮಂಡಲ ಇಂದು ಕೂಡ ಕಗ್ಗಂಟು ಎನ್ನಲಾಗಿದೆ.