ಫ್ಲೋರಿಡಾದ ಕೇಪ್ ಕೆನವರಲ್ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ ಇರುಳು ಬಾಹ್ಯಾಕಾಶಕ್ಕೆ ನೆಗೆದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ನಾಲ್ವರು ಯಾವುದೇ ತರಬೇತಿ ಇಲ್ಲದ ಪ್ರಯಾಣಿಕರನ್ನು ಒಳಗೊಂಡಿದ್ದು ಪ್ರವಾಸೋದ್ಯಮದ ಹೊಸ ಭಾಷ್ಯವನ್ನು ಬರೆಯಿತು.

ಇದರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಟಿಕೆಟ್ ಪಡೆದ ಪ್ರಯಾಣಿಕರು. 160 ಕಿಲೋ ಮೀಟರ್ ಎತ್ತರದಲ್ಲಿ ಇವರು ಮೂರು ದಿನಗಳ ಕಾಲ ಬಾಹ್ಯಾಂತರಿಕ್ಷದಿಂದ ಭೂಮಿ ಮೊದಲಾದವನ್ನು ನೋಡಿ ಸಂತೋಷಿಸಲಿದ್ದಾರೆ.