ಗುರುವಾಯನ ಕೆರೆಯಿಂದ ಗುಂಡದಬಸ್ತಿಗೆ ನಡೆಯುವಾಗ ಮುಖ್ಯವಾಗಿ ಕಣ್ಸೆಳೆದದ್ದು ಕಾಡು ಮಲ್ಲಿಗೆ. ಇದನ್ನು ಸಸ್ಯ ಶಾಸ್ತ್ರೀಯವಾಗಿ ಜಾಸ್ಮೆನಿಯಂ ಆಂಗಸ್ತಿಪೋಲಿಯಂ ಎನ್ನುತ್ತಾರೆ.

ಮಲ್ಲಿಗೆಯಲ್ಲಿ 200ಕ್ಕೂ ಹೆಚ್ಚು ಜಾತಿಗಳು ಇವೆ. ಮನೆ ಮತ್ತು ಊರ ಮಲ್ಲಿಗೆ ಜನಬಳಕೆಯದು. ಜೂನ್ ಮತ್ತು ಆಗಸ್ಟ್ ನಡುವೆ ಅರಳುವ ಕಾಡು ಮಲ್ಲಿಗೆ ತುಳುನಾಡಿನ ಕಾಡು ಗುಡ್ಡೆಗಳಲ್ಲಿ, ಮಲೆನಾಡಿನ ಮಲೆಗಳಲ್ಲಿ ಸಾಮಾನ್ಯ. ಆದರೆ ಬಹುತೇಕ ಕಡೆಗಣಿಸಲ್ಪಟ್ಟ ಹೂವು.

ಪಾಡಿ ಮಲ್ಲಿಗೆ, ಗುಡ್ಡೆ ಮಲ್ಲಿಗೆ ಎಂದು ತುಳುವಿನಲ್ಲಿ ಹೇಳುವ ಇದು ಕಾಡು ಮಲ್ಲಿಗೆ, ಬೆಟ್ಟ ಮಲ್ಲಿಗೆ ಎಂದೂ ಗುರುತು ಪಡೆದಿದೆ. ಇದು ಸಣ್ಣ ಹಬ್ಬುವ ಬಳ್ಳಿ ಪೊದೆ ಜಾತಿಯಯಾಗಿದೆ. ಒಂದೇ ಗಿಡದಲ್ಲಿ ವಿಭಿನ್ನ ಎಲೆ ಬಿಡುವ ಇದರ ಕವಲು ಗೆಲ್ಲುಗಳು ಎದುರುಬದುರಾಗಿ ಇರುತ್ತವೆ.

ದರ ನಕ್ಷತ್ರದಾಕಾರದ ಹೂಗಳು 7, 8 ಪಕಳೆಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ ಹಾಗೂ ಸೊಗಸಾದ ಪರಿಮಳ ಬೀರುತ್ತವೆ.