ಸದಾ ಇನ್ನೊಬ್ಬರ ದೋಷ ಹುಡುಕುವುದು ಒಂದು ರೀತಿಯ ಮನೊರೋಗವೇ ಸರಿ. ಈ ಪ್ರಪಂಚದಲ್ಲಿ ತಪ್ಪು ಹುಡುಕುವ ಜನರಿಗೇನು ಕಮ್ಮಿ ಇಲ್ಲ. ಬೇರೆಯವರ ಅಭ್ಯಾಸಗಳು, ರೀತಿ ನೀತಿಗಳು, ಜೀವನಶೈಲಿಗಳು ಇವರಿಗೆ ಹಿಡಿಸುವುದೇ ಇಲ್ಲ. ಈ ಕಾರಣದಿಂದ ಅವರು ಹೆಜ್ಜೆ ಹೆಜ್ಜೆಗೂ ತಪ್ಪು ಕಂಡುಹಿಡಿಯುತ್ತಾರೆ. ಅಡುಗೆಗೆ ಉಪ್ಪು ಹೆಚ್ಚಾಗಿದೆ, ಇವತ್ತು ಊಟ ರುಚಿಯಾಗಿರಲಿಲ್ಲ. ಊಟ ಮಾಡುವಾಗ ನೀರು ಇಟ್ಟಿಲ್ಲ ಊಟದ ಜೊತೆ ಉಪ್ಪಿನಕಾಯಿ ಬಳಸಲಿಲ್ಲ  ಯಾವುದಾದರೊಂದು  ಸಣ್ಣಪುಟ್ಟ  ಕಾರಣಕ್ಕೆ ರಂಪಾಟ ಮಾಡುವುದು. ಊಟ ಮಾಡುವಾಗ ಒಂದು ಅಗಳು ಕೆಳಗೆ ಬಿದ್ದರೆ ಅವರಿಗೆ ಊಟ ಮಾಡೊಕೆ ಬರುವುದಿಲ್ಲ ಎಂದರ್ಥ ಅಲ್ಲವಲ್ಲ. ಅವರು ಹುಟ್ಟು ಹಬ್ಬಕ್ಕೆ ವಿಶ್ ಮಾಡಲಿಲ್ಲ ಅಂತ ದ್ವೇಷಕಾರುವರು. ಹೊಟ್ಟೆಕಿಚ್ಚು ಪಡುವುದು ನಿಂದಿಸುವುದು ಒಳ್ಳೆತನವಂತೂ ಅಲ್ಲ ತಾನೇ. ಸಂಬಂಧವಿಲ್ಲದ ವಿಷಯಕ್ಲ ಒಂದಕ್ಕೊಂದು ಗಂಟು ಹಾಕಿ ದುಃಖಿಸುವುದು ತನ್ನ ತಪ್ಪಿಗೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದಿದೆಯಲ್ಲ ಅದು ಶುದ್ಧ ನಾನ್ಸೆನ್ಸ... ತಪ್ಪನ್ನು ತಪ್ಪು ಅಂತ ಹೇಳಲಿ ಪರವಾಗಿಲ್ಲ ಆದರೆ ಬರಿ ಇನ್ನೊಬ್ಬರಲ್ಲಿ ತಪ್ಪುಗಳನ್ನು ಹುಡುಕುವುದು ತಪ್ಪು. ಬರೀ ತಪ್ಪುಗಳನ್ನ ಕಾಣುವ ಕಣ್ಣಿಗೆ ಸರಿಯಾದದ್ದು ಕಾಣುವುದೇ ಇಲ್ಲ. ಇಂತಹ ಜನ ಎಲ್ಲ ನಿಟ್ಟಿನಲ್ಲೂ ಪರ್ಫೆಕ್ಟ್ ಆಗಿರುತ್ತಾರಾ? ಖಂಡಿತ ಇಲ್ಲ ಸದಾ ಇನ್ನೊಬ್ಬರ ಹುಳುಕು ಹುಡುಕುವ ಮನ ಕೊಳಕು ಆಗುವುದು. ಮಕ್ಕಳನ್ನು ಇತರೊಂದಿಗೆ ಹೊಲಿಕೆಮಾಡಿ ನಿಂದಿಸುವುದು ಅನವಶ್ಯಕವಾಗಿವ ಪತ್ನಿ ತವರುಮನೆಗೆ ನಿಂದಿಸುವುದಂತೂ ತಪ್ಪು ಇದು ಯಾವ ಹೆಂಗಸು ಕೂಡ ಸಹಿಸುವುದಿಲ್ಲ ಸಹಿಸಲೂಬಾರದು ..ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಭಾವ, ತನ್ನದೇ ಆದ ರೀತಿನೀತಿ, ದೃಷ್ಟಿಕೋನ ಹಾಗೂ ಆಸಕ್ತಿ ಇರುತ್ತವೆ. ಎಲ್ಲರೂ ನನ್ನ ಸ್ವಭಾವದ ಹಾಗೆ ಇರುವುದಿಲ್ಲ. ಹೀಗಾಗಿ ಯಾರೊಬ್ಬರೂ ಪರ್ಫೆಕ್ಟ್ ಅಲ್ಲ ಎಂದು ಯೋಚಿಸಿ, ಪ್ರತಿಯೊಬ್ಬರಲ್ಲೂ ತಪ್ಪು ಕಂಡುಹಿಡಿಯುವವರಲ್ಲಿ ಯಾವುದೇ ವಿಶೇಷ ಗುಣಗಳು ಇರುವುದಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಾಗುತ್ತದೆ. ಎಲ್ಲ ವಿಷಯಕ್ಕೂ ಮೂಗುತೂರಿಸುವ ಅವಶ್ಯಕತೆನಾದರೂ ಏನಿದೆ..?ಕೆಲವನ್ನು ಹಾಗೇ ಕೆಲವರನ್ನ ಅವರಷ್ಟಕ್ಕೆ ಬಿಟ್ಟುಬಿಡಬೇಕು. ಕೂತರು ತಪ್ಪು ನಿಂತರೂ ತಪ್ಪು ಎಂಬ ದೋರಣೆಗಳಿಂದ ಇನ್ನೊಬ್ಬರಿಗೆ ಕಿರಿ ಕಿರಿ ಉಂಟಾಗುತ್ತದೆ ಖಿನ್ನತೆಗೊಳಗಾಗುತಾರೆ ಮನಸ್ತಾಪಗಳು ಹೆಚ್ಚಾಗುತ್ತದೆ. ದಿನ ಸಾಯುವವರಿಗೆ ಅಳುವವರಾರು ಎಂಬಂತೆ ಬರೀ ನಿಂದಿಸುವ ನಾಲಿಗೆಗೆ ನಿರ್ಲಕ್ಷ್ಯವೇ ಪ್ರತ್ಯುತ್ತರವಾಗುತ್ತದೆ. ನಂತರ ನನಗೆ ಎಲ್ಲರೂ ನಿರ್ಲಕ್ಷಿಸುತಿದ್ದಾರೆ ಗೌರವ ಕೊಡುತ್ತಿಲ್ಲವೆಂದು ಗೊಣಗುವರು. ಗೌರವ ಕೇಳಿ ಪಡೆಯುವಂತಹ ಉಡುಗೊರೆಯಂತೂ ಅಲ್ಲ. ಗೌರವ ಸಂಪಾದಿಸಬೇಕು. ಬರೀ ತೆಗುಳುವಿಕೆ ಮಾತ್ರವಲ್ಲ ಹೊಗಳಿಕೆಗೂ ಸಿದ್ದರಿರಬೇಕು ಮಕ್ಕಳು ಆಟದಲ್ಲಿ ಗೆದ್ದಾಗ ಹೊಗಳಿದರೆ ಅವರಿಗೂ ಹುರುಪು. ಹಾಂಗಂತ ಮಕ್ಕಳಿಗೆ ಅನಾವಶ್ಯಕವಾಗಿ ಹೊಗಳುವುದು ಬೇಡ. ಹೆಂಡತಿಗೆ ಅಡುಗೆ ಚನ್ನಾಗಿದೆ ಅಂದರೆ ಸಾಕು ಅವಳ ಆಯಾಸ ಮಾಯವಾಗುತ್ತದೆ. ಗೃಹಿಣಿಗೆ ನೂರು ಕೆಲಸಗಳಿರುತ್ತದೆ. ಪ್ರತಿಯೊಂದಕ್ಕೂ ಅವಳ ನಿಂದಿಸುವುದು ಬಿಟ್ಟು ಸಣ್ಣಪುಟ್ಟ ಕೆಲಸಗಳಿಗೆ ಕೈಜೊಡಿಸುವುದರಲ್ಲಿ ತಪ್ಪೆನಿದೆ. ನೀವು ನಿಮ್ಮಿಂದ ತಪ್ಪಾಗದಂತೆ ಅಚ್ಚುಕಟ್ಟಾಗಿ ನಿಮ್ಮ ಕೆಲಸಮಾಡತಾ ಇರಿ. ಬೇರೆಯವರ ತಪ್ಪುಗಳಿಗೆ ತಲೆ ಕೆಡಿಕೊಳ್ಳಬೇಡಿ...ಸಂತೋಷವಾಗಿರಿ ಬೇರೆಯವರಿಗೂ ಸಂತೋಷವಾಗಿರಲು ಬಿಡಿ.

✍ ಅಂಜಲಿ ಶ್ರಿನಿವಾಸ