ಹೆಣ್ಣೆಂದರೆ ಶಕ್ತಿ ಸಹನಾ ಮೂರ್ತಿ ಹೆಣ್ಣು ಪ್ರತಿ ಪಾತ್ರದಲ್ಲೂ ಅದ್ಭುತ ಕಾರ್ಯಕ್ಷಮತೆಯನ್ನು ಹೊಂದಿದವಳು...ಹೆಣ್ಣೆಂದರೆ ಬೆಳಕು  

ಹೆಣ್ಣೊಂದು ಹುಟ್ಟಿತೆಂದು ಗೊಣಗುವ ಜನಗಳಿದ್ದಾರೆ

ಹೆಣ್ಣೊಂದು ಹುಟ್ಟಿತೆಂದು ಸಂಭ್ರಮಿಸುವವರು ಇದ್ದಾರೆ. ಹೆಣ್ಣೊಂದು ಹುಟ್ಟಿತೆಂದು ಸಿಹಿ ಹಂಚದೆ ಕಹಿ ಮಾತಾಡುವ ಜನರುಂಟು ಮನೆಗೆ ಲಕ್ಷ್ಮೀ ಬಂದಳೆಂದು ಕುಣಿದು ಕುಪ್ಪಳಿಸುವವರು ಉಂಟು. ಇತ್ತಿಚಿಗೆ ನನ್ ಕಣ್ಣಿಗೆ ಕಂಡಂತಹ ದೃಶ್ಯ ಆಸ್ಪತ್ರೆ   ವಾರ್ಡ್ ನಲ್ಲಿ ಗಂಡು ಮಗು ಹುಟ್ಟಿತೆಂದು ಸಡಗರದಿಂದ ಇದ್ದರು. ಅಪ್ಪ ತಾತನ ಹೋಲಿಕೆ ಮಾಡುತ್ತ ಸಂಭ್ರಮಿಸುತ್ತಿದ್ದರು...ಪಕ್ಕದ ವಾರ್ಡನಲ್ಲಿ ಹೆಣ್ಣು ಮಗು    ಹುಟ್ಟಿತೆಂದು ಮೂಗುಮುರಿಯುತಾ ಕುತಿದ್ದಲ್ಲದೆ ಮಗುವಿನ ಕಡೆಗೆ ನೋಡುವವರು ಇಲ್ಲದೆ ಸಂಬಂಧಿಕರು ಅಯ್ಯೊ ಪಾಪ ಹೆಣ್ಣಾಯಿತಂತೆ ಕನಿಕರ ವ್ಯಕ್ತಪಡಿಸುವ ಡೊಂಬರಾಟ...ಸೂತಕದ ಛಾಯೆ ಇವರ ನಡುವಳಿಕೆಯಿಂದ ಬಾಣಂತಿ ಕಣ್ಣಲ್ಲಿ ನೀರು. 

ಕಾಲ ಬದಲಾಗಿದೆ ಈಗ ಹೆಣ್ಣು ಗಂಡು ಇಬ್ಬರೂ  ಸಮಾನರು ಎಂದು ನೀವು ಹೇಳಬಹುದು ಆದರೆ ನಮ್ಮ ಜನ ಅವರ ಮನಸ್ಥಿತಿಯನ್ನ ಅಷ್ಟು ಸುಲಭವಾಗಿ ಬಿಡುವುದಿಲ್ಲ...ಬಹಳ ಜನರಿದ್ದಾರೆ ಹೆಣ್ಣನ್ನ ಗೌರವಿಸುವವರು ಸೊಸೆಯಾಗಿ ಮಗಳಾಗಿ ಅವಳ ಪ್ರತಿಪಾತ್ರವನ್ನು ಆರಾಧಿಸುವವರು...ಹಾಗೆಯೇ ಹಲವರಿದ್ದಾರೆ   ಅವಳನ್ನ ಅವಹೇಳನ ಮಾಡುವವರು ಹೆಣ್ಣಾಗಿ ಹೆಣ್ಣನ್ನೆ ದ್ವೆಷಿಸುವರು. ಅದೇಕೊ ಈಗಲೂ ಇಂತಹ ಮನಸ್ಥಿತಿಗಳು ನಮ್ಮಲ್ಲಿವೆ ಎಂಬುವುದೇ ವಿಷಾದನಿಯ...ಕಾಲ ಬದಲಾದರೂ  ಮನಸ್ಥಿತಿಗಳಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ...ಒಂದುಕಡೆ ಮೊದಲನೆಯ ಸಂತಾನ ಹೆಣ್ಣಾಯಿತೆಂದು ಗೊಣಗುತ ಕಾರಲ್ಲಿ ಕೂತು ಹೊದರೊಬ್ಬರು  ಅಲ್ಲೊಬ್ಬ  ಆಟೋ ಡ್ರೈವರ್ ತನ್ನ ಮೂರನೇ ಸಂತಾನ ಹೆಣ್ಣು ಮಗು ಹುಟ್ಟಿತೆಂದು ಆಟೋವಿಗೆ ಹೂವಿನ ಅಲಂಕಾರ ಮಾಡಿ ಅದ್ದೂರಿಯಾಗಿ ತನ್ನ ಮಗಳನ್ನು ಮನೆಗೆ ಸ್ವಾಗತಿದ... 

ಸಿಹಿ ಹಂಚಿ ಸಂಭ್ರಮಿಸಿದ...ಇಬ್ಬರ ವರ್ತನೆ ನೋಡಿ ಎನಿಸಿತು  ಶ್ರೀಮಂತಿಕೆ ಎನ್ನುವುದು ಅಂತಸ್ತಿನಲ್ಲಿಲ್ಲ ಅಂತರಂಗದಲ್ಲಿದೆ.. ಇನ್ನೊಂದುಕಡೆ  ಹೆಣ್ಣು ಗಂಡು ಎನ್ನುವ ವ್ಯತ್ಯಾಸವಿಲ್ಲದಂತೆ ಪ್ರತಿಯೊಂದು ರಂಗದಲ್ಲಿಯೂ ಕೂಡ ಪುರುಷನ ಸರಿಸಮಾನವಾಗಿ ಹೆಗಲಿಗೆ ಹೆಗಲು ನೀಡಿ ದುಡಿಯುವಲ್ಲಿ ಹೆಣ್ಣುಮಕ್ಕಳು ಸಹ ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿ. ಯಾವಾಗ ಲಿಂಗ ತಾರತಮ್ಯತೆ ನಿರ್ಮೂಲನೆಯಾಗುತ್ತದೆಯೋ ಆವಾಗಲೇ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಇದನ್ನು ಸಾಕಾರ ಮಾಡುವ ಗಟ್ಟಿ ನಿರ್ಧಾರದಿಂದ ಹೆಣ್ಣುಮಕ್ಕಳು ಮುನ್ನುಗ್ಗಬೇಕಿರುವುದು ಅನಿವಾರ್ಯವಾಗಿದೆ.

✍ಅಂಜಲಿ ಶ್ರೀನಿವಾಸ್