ಮಂಗಳೂರು:  ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ ಹಾಜಿರ ಅಡ್ಡೂರು ಇವರಿಗೆ ರೂ.1.75ಲಕ್ಷ,  ಕುದ್ರುತುಲ್ಲಾ ಕುಂಜತ್ತ್‌ಬೈಲ್‌ ಮಂಗಳೂರು ಇವರಿಗೆ 94,943/- ಆಲ್ಬರ್ಟ್‌ ಡಿʼಸೋಜಾ ಮಂಗಳೂರು ಇವರಿಗೆ 75,612/-,  ಅನ್ವರ್‌ ಹುಸೇನ್‌ ಮಯ್ಯದಿ ಬಂದರ್‌ ಇವರಿಗೆ ರೂ. 70,000/-, ಬಸಮ್ಮ ಇವರಿಗೆ ರೂ. 40,000/-, ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್‌ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷರು ಜೋಕಿಮ್ ಸ್ಟ್ಯಾನಿ ಅಳ್ವಾರಿಸ್, ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾದ ಸಾಮರ್ಥ ಭಟ್, ರೊನಾಲ್ಡ್ ಕ್ರಾಸ್ಟಾ, ನವೀನ್ ಲೋಬೋ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್, ಮೀನಾ ಟೆಲ್ಲೀಸ್ ಮುಂತಾದವರು ಉಪಸ್ಥಿತರಿದ್ದರು.