ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಆರನೇ ವಾರ್ಡ್ ನ ಗಾಂಧಿನಗರದಲ್ಲಿ ಸ್ವಾಮಿ ವಿವೇಕಾನಂದ ಪಾರ್ಕ್ ಶಾಸಕ ಉಮಾನಾಥ ಕೋಟ್ಯಾನ್ ರವರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿತು. 

ಜುಲೈ 15ರಂದು ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾ ಅಧ್ಯಕ್ಷೆ  ಜಯಶ್ರೀ, ವಾರ್ಡ್ ಸದಸ್ಯೆ ದಿವ್ಯ ಜಗದೀಶ್ ನೆರವೇರಿಸಿದರು. ಸ್ಥಳೀಯರು ಸಾಕಷ್ಟು ಸಹಾಯ ನೀಡಿದ ಕಾರಣ ಸುಮಾರು 20.68 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಹಣ್ಣು ಹಂಪಲು ಗಿಡಗಳನ್ನು ನೆಟ್ಟು ಪಾರ್ಕನ್ನು ಸುಂದರಗೊಳಿಸಲು ಪೂರ್ವಭಾವಿಯಾಗಿ ಪುರಸಭಾ ಅಧ್ಯಕ್ಷೆ ಜಯಶ್ರೀ ಗಿಡವನ್ನು ನೆಟ್ಟರು. ತರುವಾಯ ಮಾತನಾಡಿದ ಶಾಸಕರು ಉತ್ತಮ ಪರಿಸರ ಹಾಗೂ ಶುದ್ಧ ಗಾಳಿಗಾಗಿ ಪಟ್ಟಣಗಳಲ್ಲಿ ಎಂದು ನುಡಿದರು.