ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 5 ಜನ ಅರ್ಜಿದಾರರಿಗೆ ರೂ. 4,09,943/- (ರೂಪಾಯಿ ನಾಲ್ಕುಲಕ್ಷದ ಒಂಬತ್ತು ಸಾವಿರದ ಒಂಬೈನೂರ ನಲವತ್ತ ಮೂರು) ಪರಿಹಾರ ಧನ ಅರ್ಜಿದಾರರ ಖಾತೆಗೆ ಬಿಡುಗಡೆ.
ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ ಮಿಸ್ಬಾ ಅಬ್ದುಲ್ ಖಾದರ್ ಉಡುಪಿ ಇವರಿಗೆ ರೂ. 2.00ಲಕ್ಷ, ಕುಂಜತ್ತ್ಬೈಲ್ ಕುದ್ರುತ್ತುಲ್ಲ ಮಂಗಳೂರು ಇವರಿಗೆ 94,943/, ಅಸೀದಾ ಭಾನು ಬಜ್ಪೆ ಇವರಿಗೆ ರೂ. 64,000/-, ರೊಬಾರ್ಟ್ ನಜರತ್ ಬಿಜೈ ಇವರಿಗೆ ರೂ. 35,000/-, ಸಪ್ನಾಜ್ ಫರಂಗಿಪೇಟ್ ಇವರಿಗೆ ರೂ. 16,000/- ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಲೀಂ, ಕಾರ್ಫೋರೇಟರ್ಗಳಾದ ಪ್ರವೀಣ್ ಚಂದ್ರ ಆಳ್ವ, ನಾಗೇಂದಕುಮಾರ್, ಭಾಸ್ಕರ್ ರಾವ್ ಸತೀಶ್ ಪೆಂಗಲ್ ಪ್ರೇಮ್ ಬಳ್ಳಾಲ್ ಬಾಗ್ ಮುಖಂಡರಾದ ಸುರೇದ್ರ ಕಾಂಬ್ಳಿ, ಪ್ರವೀಣ್ ಜೇಮ್ಸ್ ಮೀನಾ ಟೆಲ್ಲಿಸ್, ಮುಂತಾದವರು ಉಪಸ್ಥಿತರಿದ್ದರು.