ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಉತ್ತಮ ನಾಯಕರನ್ನು ಆಯ್ಕೆ ಮಾಡಿದರೆ ಉತ್ತಮ ಶಾಲಾ ಜೀವನ ಸಾಧ್ಯ ಎಂದು ಪೂರ್ಣಿಮಾ ಶೆಟ್ಟಿ ಉಪನ್ಯಾಸಕಿ ಮಹಾವೀರ ಕಾಲೇಜು ಮೂಡುಬಿದಿರೆ ಇವರು ಹೇಳಿದರು.
ಅವರು ಬಾಬುರಾಜೇಂದ್ರ ಪ್ರಸಾದ ಪ್ರೌಢಶಾಲೆಯ ಶಾಲಾ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ ಹಾಗೂ ಇನ್ನರವ್ಹೀಲ್ ಕ್ಲಬ್ ಮೂಡುಬಿದರೆ ಇವರಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಜುಲೈ 5ರಂದು ನಡೆಸಿ ಮಾತನಾಡಿದರು.
ಇನ್ನರವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷ ಶ್ವೇತಾ ಇವರು ಪುಸ್ತಕ ವಿತರಿಸಿದರು. ನಾಯಕತ್ವಕ್ಕೆ ಶ್ರದ್ದೆ ಹಠ ಬೇಕು.ಕಾರ್ಯತತ್ಪರತೆ ಬೇಕು. ಆತ್ಮವಿಶ್ವಾಸ ಅತಿಮುಖ್ಯ.ಶಿಕ್ಷಣದಿಂದ ಆತ್ಮವಿಶ್ವಾಸ ಬರುತ್ತದೆ ಎಂದು ಅವರು ಹೇಳಿದರು.
ಶಾಲೆಯ ಹಳೆ ವಿದ್ಯಾರ್ಥಿ ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಮನೋಜ ಇವರು ಉದ್ಘಾಟಿಸಿ, ಪರಿಶ್ರಮದಿಂದ ಕಲಿತರೆ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ. ನಾಯಕತ್ವಗುಣ ಬೆಳೆಸಿಕೊಳ್ಳಿ ಎಂದು ಹೇಳಿ, ಶಾಲಾ ಸಂಸತ್ತು ನಿಮಗೆ ಅನುಭವದ ವೇದಿಕೆಯಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಇನ್ನರವ್ಹೀಲ್ ಕ್ಲಬ್ ನ ಕಾರ್ಯದರ್ಶಿ ಅನಿತಾ ಇನ್ನರವ್ಹೀಲ್ ಕ್ಲಬ್ ನ ಸದಸ್ಯರಾದ ವೀಣಾ ಇವರು ಉಪಸ್ಥಿತರಿದ್ದರು.
ಸಾನಿಕಾ ಇವರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ನಾಯಕ ಪ್ರಣಾಮ್ ಉಪನಾಯಕ ಸುಹಾನ್ ಹಾಗೂ ಮಂತ್ರಿಮಂಡಳದ ಸದಸ್ಯರು, ವಿರೋಧಪಕ್ಷದ ಸದಸ್ಯರಿಗೆ ಮುಖ್ಯೋಪಾಧ್ಯಾಯರು ಪ್ರಮಾಣವಚನ ಬೋಧಿಸಿದರು. ಹೈಫಾ ಫಾತಿಮಾ ಇವರು ಧನ್ಯವಾದಗಳನ್ನು ಹೇಳಿದರು.