ಬಂಟ್ವಾಳ: ‘ಹಸಿರೇ ಉಸಿರು’ ಎಂಬ ನಾಣ್ಣುಡಿಯಂತೆ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ, ಬಂಟ್ವಾಳ ಜೂಲೈ 7 ರಂದು ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಕಾಸ್ ಶೆಟ್ಟಿ ಕೆ ಉಪವಲಯ ಅರಣ್ಯಾಧಿಕಾರಿಗಳು ಬಂಟ್ವಾಳ ಇವರು ಭಾಗವಹಿಸಿದರು. ಪರಿಸರವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎನ್ನುತ್ತ ಪರಿಸರ ಸಂರಕ್ಷಣೆ, ಆಚರಣೆಯ ಮಹತ್ವ, ಮುಖ್ಯ ಉದ್ಧೇಶದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಸ್ಮಿತಾ ಗಸ್ತು ಅರಣ್ಯಪಾಲಕರು ಬಂಟ್ವಾಳ ಶಾಖೆ ಇವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಹರಿಪ್ರಸಾದ್ ರವರು‘ ಇರುವುದೊಂದೆ ಭೂಮಿ’ ಅದರ ರಕ್ಷಣೆಯ ಹೊಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ನುಡಿದರು. ವಿದ್ಯಾರ್ಥಿಗಳಿಂದ ವಿವಿಧ ಪ್ರಕೃತಿ ಗೀತೆ, ಪರಿಸರ ಸಂಬಂಧಿ ನೃತ್ಯ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿ ಸಂಘದ ಸದಸ್ಯರು, ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು. ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ ವೀಣಾ ದೇವಾಡಿಗ, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರವಣ್ ಸ್ವಾಗತಿಸಿದರು, ಹನ್ಸಿಕಾ ಎಸ್ ವಂದಿಸಿದರು , ಆಶ್ನಿ ಆರ್ ಶೆಟ್ಟಿಕಾರ್ಯಕ್ರಮವನ್ನು ನಿರೂಪಿಸಿದರು.