ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆ. 27ರಂದು ಶ್ರೀ ಗಣೇಶಚತುರ್ಥಿಯನ್ನುಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ 10.30ರಿಂದ ಲೋಕಕಲ್ಯಾಣಾರ್ಥವಾಗಿತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಮಾರ್ಗದರ್ಶನದಲ್ಲಿ108 ನಾರಿಕೇಳ ಗಣಪತಿ ಹವನ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಗಣಪತಿ ಹವನದ ಪೂರ್ಣಾಹುತಿ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. 

ಅಂದು ಮಧ್ಯಾಹ್ನ12.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಈ ದೇವತಾ ಕಾರ್ಯದಲ್ಲಿ ಭಗವದ್ಭಕ್ತರೆಲ್ಲರೂ ಪಾಲ್ಗೋಳಬೇಕೆಂದು ವಿನಂತಿ.