ಅಫಘಾನಿಸ್ತಾನದ ಇತಿಹಾಸ ತಜ್ಞೆ ಡಾ. ಬಹಾರ್ ಜಲಾಲಿಯವರು ತಾವು ಹಿಂದೆ ಹಾಕಿದ್ದ ಉಡುಗೆಗಳ ಫೋಟೋ ಹಾಕಿ, ಇದು ನಮ್ಮ ಸಂಸ್ಕೃತಿ ನಿಮ್ಮ ಕಪ್ಪು ಬುರ್ಕಾ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
#DoNotTouchMyCloths ಮತ್ತು #Afghanistan Culture ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಆನ್‌ಲೈನ್ ಅಭಿಯಾನವನ್ನು ಅಫಘಾನಿಸ್ತಾನದ ಮಹಿಳೆಯರು ಆರಂಭಿಸಿದ್ದಾರೆ. ನಾನಾ ಪ್ರದೇಶಗಳ ಪಾರಂಪರಿಕ ಉಡುಗೆಗಳಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಮುಟ್ಟಬೇಡಿ ನಮ್ಮ ಬಟ್ಟೆ ಎಂದು ಎಚ್ಚರಿಸಿದ್ದಾರೆ.