ಕನ್ನಡವು 6.4 ಕೋಟಿ ಜನರ ನಾಡಿಮಿಡಿತ, ಎರಡು ಸಾವಿರಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿದೆ. ಹೀಗಿರುವಾಗ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸುವುದು ಅಸಮರ್ಪಕ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಹಿಂದಿಗೆ ಕನ್ನಡ ಇಲ್ಲವೇ ದ್ರಾವಿಡ ಭಾಷೆಗಳಷ್ಟು ಇತಿಹಾಸ ಇಲ್ಲ. ಅಲ್ಲದೆ ನಮ್ಮ ಜನರಿಗೆ ಕನ್ನಡ ಅರ್ಥವಾದಂತೆ ಬೇರೆ ಯಾವ ಭಾಷೆಯೂ ಅರ್ಥ ಆಗುವುದಿಲ್ಲ. ಎಲ್ಲ ಭಾಷೆ ಬೇಕು ನಿಜ. ಆದರೆ ಯಾವ ಭಾಷೆಯೂ ಹೇರಿಕೆ ಆಗಬಾರದು ಎಂದು ಕುಮಾರಸ್ವಾಮಿ ತಿಳಿಸಿದರು.