ಉತ್ತರ ಪ್ರದೇಶದ ಮಿರ್ಜಾಪುರದ ತರುಣಿಯೊಬ್ಬಳನ್ನು ಆಕೆಯ ಚಿಕ್ಕಪ್ಪನೇ ಆದ ಟ್ರಾಫಿಕ್ ಕಾನ್ಸ್‌ಟೇಬಲ್ ನಿತ್ಯ ಅತ್ಯಾಚಾರ ಮಾಡಿದ್ದಲ್ಲದೆ, ವೀಡಿಯೋ ತೆಗೆಯಲು ನೋಡಿದ್ದರಿಂದ ತಪ್ಪಿಸಿಕೊಂಡು ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನದಿಗೆ ಹಾರುವ ಮೊದಲು ಪೋಲೀಸು ಸಹಾಯ ವಾಣಿಗೆ ಫೋನ್ ಮಾಡಿದ್ದರಿಂದ ಪೋಲೀಸರು ಮತ್ತು ಅಲ್ಲಿದ್ದ ಚಾಲಕರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
2019ರ ಜನವರಿಯಲ್ಲಿ ಈ ಕಾನ್ಸ್‌ಟೇಬಲ್ ಸಂತ್ರಸ್ತೆಯ ಕುಟುಂಬವನ್ನು ಕುಂಭ ಮೇಳಕ್ಕೆ ಕರೆದೊಯ್ದಿದ್ದ. ಅಲ್ಲಿ ಕೋಣೆಯಲ್ಲಿ ಮತ್ತು ಬರಿಸಿ ಅತ್ಯಾಚಾರ ಎಸಗಿದ್ದ. ಆ ಚಾಳಿ ಮುಂದುವರಿಸಿದ್ದಲ್ಲದೆ ಇತ್ತೀಚೆಗೆ ಬ್ಲ್ಯಾಕ್ ಮೇಲ್ ಆರಂಭಿಸಿದ್ದ ಎಂದು ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿ ಆರೋಪಿಯನ್ನು ಅಮಾನತು ಮಾಡಲಾಗುತ್ತದೆ ಎಂದು ಟ್ರಾಫಿಕ್ ಡಿಸಿಪಿ ತಿಳಿಸಿದರು.