ಮಂಗಳ ಗ್ರಹದಲ್ಲಿ ಅಲೆದಾಡುತ್ತಿರುವ ನಾಸಾದ ಪರ್ಸಿವಿರೆನ್ಸ್ ರೋವರ್ ಅಲ್ಲಿ ಬಂಡೆ ಕೊರೆದು ಕಲ್ಲು ಸಂಗ್ರಹಿಸಿದೆ. ಅದನ್ನು ಭೂಮಿಯಲ್ಲಿ ನೋಡಲು ಇನ್ನೂ ಒಂಬತ್ತು ವರುಷ ಕಾಯಬೇಕು.
ಸೆಪ್ಟೆಂಬರ್ 1ರಂದು ತನ್ನ ಏಳು ಅಡಿ ಉದ್ದದ ರೋಬೋ ಕೈ ಬಳಸಿ ಪರ್ಸಿವಿರೆನ್ಸ್ ಬಂಡೆ ಕೊರೆದು ಕಲ್ಲು ಹೆಕ್ಕಿದೆ. ಆಗಿನ ಫೋಟೋಗಳು ಸ್ಪಷ್ಟವಿರಲಿಲ್ಲ. ಅದನ್ನು ಪ್ರಯೋಗ ಪೆಟ್ಟಿಗೆಗೆ ಸೇರಿಸಿ ಅಡಗಿಸಿಟ್ಟ ಫೋಟೋ ಸ್ಪಷ್ಟವಾಗಿ ಬಂದಿರುವುದರಿಂದ ನಾಸಾ ಆ ಬಗೆಗೆ ಟ್ವೀಟ್ ಮಾಡಿದೆ.
ಒಟ್ಟು 43 ಪ್ರಯೋಗ ಪೆಟ್ಟಿಗೆಗಳು ಇದ್ದರೂ 8ರಲ್ಲಿ ಪರ್ಸಿವಿರೆನ್ಸ್ ಏನನ್ನಾದರೂ ಸಂಗ್ರಹಿಸುವ ನಿರೀಕ್ಷೆ ಇದೆ.
ಯೂರೋಪಿನ ಬಾಹ್ಯಾಕಾಶ ಸಂಸ್ಥೆಯ ನೆರವಿನಿಂದ 2030ರ ಹೊತ್ತಿಗೆ ಪರ್ಸಿವಿರೆನ್ಸ್ ಭೂಮಿಗೆ ತೀರಿಸಿಕೊಳ್ಳುವ ಯೋಜನೆ ನಾಸಾದ್ದು.