ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ, ಕವಿಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜನವರಿ 3,2021 ಭಾನುವಾರದಂದು ಸಂಜೆ 3 ಗಂಟೆಗೆ ಕೊಂಚಾಡಿ ಶ್ರೀ ರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ..

ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲರಾದ ಪ್ರೊ.ಕೃಷ್ಣಮೂರ್ತಿ ಅವರು ವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ,ಪತ್ರಕರ್ತರಾದ ಶ್ರೀ ಚಿದಂಬರ ಬೈಕಂಪಾಡಿಯವರು ವಹಿಸುವರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕವಿ

ಹರೀಶ ಸುಲಾಯ ಒಡ್ಡ‌ಂಬೆಟ್ಟು ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು..

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕುನ್ಹಾ ತಾಕೊಡೆಯವರು ನೂತನ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್  ಹಾಗೂ ಇತರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡುವರು.

ಇದೇ ಸಂದರ್ಭದಲ್ಲಿ ವಕೀಲರೂ ಲೇಖಕರೂ ಆಗಿರುವ ರೇಮಂಡ್ ಡಿಕುನ್ಹಾ ತಾಕೊಡೆ ಅವರ 'ನನ್ನವಳ ಕವಳ' ಕೃತಿಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ಬಿಡುಗಡೆಗೊಳಿಸುವರು. 

ಹಿರಿಯ ಸಾಹಿತಿ, ಪತ್ರಕರ್ತ  ಚಿದಂಬರ ಬೈಕಂಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ರೇಮಂಡ್ ಡಿಕುನ್ಹಾ, ಶ್ಯಾಮ್ ಪ್ರಸಾದ್ ಭಟ್ , ತೃಪ್ತಿ ಜಿ.ಕುಂಪಲ, ಎಂ.ಪಿ. ಬಶೀರ್ ಅಹಮ್ಮದ್ ಬಂಟ್ವಾಳ, ವ. ಉಮೇಶ ಕಾರಂತ್, ಅರ್ಚನಾ ಕುಂಪಲ, ರೇಖಾ ನಾರಾಯಣ್ ಪಕ್ಷಿಕೆರೆ, ಚಂದ್ರಿಕಾ ಕೈರಂಗಳ, ಸುಮಾ.ಎಸ್. ಬಾರ್ಕೂರು, ವಿಜೇಶ್ ದೇವಾಡಿಗ. ಮಂಗಳಾದೇವಿ, ವಸುಧಾ ಮೂಳೂರು, ಕೆ.ಗೋಪಾಲಕೃಷ್ಣ ಭಟ್, ಆಕೃತಿ ಭಟ್, ಡಾ.ಸುರೇಶ್ ನೆಗಳಗುಳಿ, ಕೆ.ಆರ್.ಹಲಗಿ,ಹಸನ್ ಕುಂಜತ್ತಬೈಲ್, ಅಸುಂತ ಡಿಸೋಜಾ ಬಜಾಲ್,  ಸುಧಾ ನಾಗೇಶ್ ಮೊದಲಾದ ಕವಿ ಕವಯತ್ರಿಯರು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.