ರಾಮಕೃಷ್ಣ ಆರ್.

ಮಂಗಳೂರು, ಜು.28: ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ರಾಮಕೃಷ್ಣ ಆರ್. (ಸಂಯುಕ್ತ ಕರ್ನಾಟಕ) ಮುಂದಿನ ಮೂರು ವರ್ಷದ ಅವಧಿಗೆ  ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವೇಣು ವಿನೋದ್ (ವಿಜಯವಾಣಿ) ಹಾಗೂ ಕೋಶಾಧಿಕಾರಿಯಾಗಿ ಹರ್ಷ (ಡೆಕ್ಕನ್ ಹೆರಾಲ್ಡ್) ಆಯ್ಕೆಯಾಗಿದ್ದಾರೆ.

ವೇಣು ವಿನೋದ್

ಬುಧವಾರ ಪತ್ರಿಕಾಭವನದಲ್ಲಿ ಟ್ರಸ್ಟ್ ನ ಅಧ್ಯಕ್ಷ ಆನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕೋವಿಡ್ -19 ಸಂದರ್ಭದಲ್ಲಿ ಪತ್ರಿಕಾಭವನ ಟ್ರಸ್ಟ್ ವತಿಯಿಂದ 2020ನೇ ಸಾಲಿನಲ್ಲಿ ದಕ್ಷಿಣ ಕನ್ನಡ  ಕಾರ್ಯ ನಿರತ ಪತ್ರಕರ್ತರ ಸಂಘದ 246 ಸದಸ್ಯರಿಗೆ 2,80,088 ರೂ ಪಾಯಿ ಮೊತ್ತದ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಅದೇ ರೀತಿ 2021ನೇ ಸಾಲಿನಲ್ಲಿ 311 ಪತ್ರಕರ್ತರಿ ಗೆ 2,15,110 ರೂಪಾಯಿ ಮೊತ್ತದ ಅಕ್ಕಿ ಕಿಟ್ ಗಳನ್ನು ಟ್ರಸ್ಟ್ ನಿಂದ ನೀಡಲಾಗಿದೆ. ಪತ್ರಕರ್ತರಿಗೆ ಈ ಕಿಟ್ಗಳನ್ನು  ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ  ವಿತರಿಸಲಾಗಿದೆ.

ಹರ್ಷ

ಟ್ರಸ್ಟ್ ನ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಸದಸ್ಯರು ಮತ್ತು ಎಲ್ಲಾ ಟ್ರಸ್ಟಿಗಳಿಗೂ ಆನಂದ ಶೆಟ್ಟಿಯವರು ಕ್ರತಜ್ಞತೆ  ಸಲ್ಲಿಸಿದರು.

ಟ್ರಸ್ಟ್ ನ ಕೋಶಾಧಿಕಾರಿ ರವಿ ಪೊಸವಣಿಕೆ ಲೆಕ್ಕ ಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಬಿ‌.ಎನ್ ವಂದಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮತ್ತು ಟ್ರಸ್ಟೀ  ಬಿ. ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.