ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ  ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ),  ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್  ಸಮುದಾಯದ ಇಂಜಿನಿಯರಿಂಗ್, ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ''ಪ್ರಗತಿ ಹಾಗೂ ಸ್ಪೂರ್ತಿ -2025' ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.

ವಿಶ್ವ ಕೊಂಕಣಿ ಕೇಂದ್ರದ  ಕೋಶಾಧಿಕಾರಿ ಬಿ ಆರ್ ಭಟ್ ಅವರು “ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತ ವಾದಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೇರಿ ಸಮಾಜಕ್ಕೆ ಉಪಯುಕ್ತವಾದಂತಹ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ ಪೈ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ನಮ್ಮ ಕೊಂಕಣಿ ಭಾಷೆ ನಮ್ಮ ಸಮಾಜ,  ನಮ್ಮ ಮಾತೃಭಾಷಾ ಶ್ರೀಮಂತಿಕೆ ನಮ್ಮ ಅಸ್ತಿತ್ವವಾಗಿದೆ. ನಾವು ಯಾವುದೇ ದೇಶದಲ್ಲಿ ನಮ್ಮ ವೃತ್ತಿಜೀವನವನ್ನು ನಡೆಸಿದರೂ, ಎಷ್ಟೇ ಎತ್ತರಕ್ಕೇರಿದರೂ ನಮ್ಮ ಮಾತೃ ಸ್ಥಾನವನ್ನು, ಮಾತೃ ಭಾಷೆಯನ್ನು ಮರೆಯದೆ, ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಈಗಿನ ಕಾಲಕ್ಕೆ ಅತೀ ಅವಶ್ಯಕ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ ನಾಯಕ್ ಮೈರಾ, ಅವರು, ಸ್ಥಾಪಕ ಅಧ್ಯಕ್ಷರಾದ ದಿವಂಗತ ಬಸ್ತಿವಾಮನ ಶೆಣೈ ಯವರನ್ನು ನೆನಪಿಸುತ್ತಾ…  ಪ್ರಸ್ತುತ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈಯವರ ನೇತೃತ್ವದಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಭಾಷಿಕ  ಹಾಗೂ ಶೈಕ್ಷಣಿಕ ಹಲವಾರು ಉಪಯುಕ್ತವಾದಂತಹ ಕಾರ್ಯಕ್ರಮ ನಡೆಯುತಲಿದ್ದು, ಇಂತಹ ಈ ಕಾರ್ಯಾಗಾರ ವಿದ್ಯಾರ್ಥಿಗಳ  ಕೌಶಲ್ಯ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಗೌರವಿಸುವ ಉದ್ದೇಶದಿಂದ ಕೂಡಿತ್ತು. ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಹಿರಿಯರ ಮಾರ್ಗದರ್ಶನದಂತೆ  ಸಮಾಜಕ್ಕೆ ಸೇವೆ ಸಲ್ಲಿಸಬೇಕು, ಎಂದು ಹೇಳಿದರು.    

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಕಾರ್ಯಾಗಾರದ ಶಿಸ್ತುಬದ್ಧ ಚಟುವಟಿಗಳನ್ನು  ಮತ್ತು  ತಮ್ಮ ಅನುಭವವನ್ನು ಹಂಚಿಕೊಂಡರು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.  ಡಾ. ವಿಜಯಲಕ್ಷ್ಮಿ ನಾಯಕ್ ಅವರು  ನಾಲ್ಕು ದಿನಗಳ ಈ ಕಾರ್ಯಗಾರದ ಉಸ್ತುವಾರಿಯನ್ನು ವಹಿಸಿದ್ದು, ಜೊತೆಯಲ್ಲಿ ಲಕ್ಷ್ಮೀ ಕಿಣಿ, ವಿಘ್ನೇಶ್ ಸಹಕರಿಸಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ ದೇವದಾಸ್ ಪೈ, ಪೂರ್ಣಾನಂದ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ಅನಂತ್ ಪ್ರಭು ಮರೋಳಿ, ಮೋಹನ್ ಪ್ರಭು ಕುಲಶೇಖರ, ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿವಿಜೇತ ನಾರಾಯಣ ನಾಯಕ್ ಕಿನ್ನಾಜೆ, ಬೆಳ್ತಂಗಡಿ ವಲಯ ಅಧ್ಯಕ್ಷರಾದ ಪ್ರಭಾಕರ್ ಪ್ರಭು ಮುದಲಡ್ಕ, ಕೋಶಾಧಿಕಾರಿ ಪ್ರದೀಪ್ ನಾಯಕ್ ಬಲ್ಕತ್ಯಾರು, ರಾಘವೇಂದ್ರ ಪ್ರಭು ಮುದಲಡ್ಕ, ಜೊತೆಗೆ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಸುಧಾಕರ್ ಪ್ರಭು ಪೆಮ೯ರೋಡಿ, ಸುಚಿತ್ರ ರಮೇಶ ನಾಯಕ್, ಮೋಹನ್ ನಾಯಕ್ ಒಡ್ಡೂರು, ಉಪೇಂದ್ರ ನಾಯಕ್,  ಸುಧಾಕರ ನಾಯಕ್ ಅಸೈಗೋಳಿ, ದಯಾನಂದ ನಾಯಕ್ ಮೈರ, ಗಣೇಶ್ ನಾಯಕ್ ಬೋಳಂಗಡಿ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಚಿದಾನಂದ ಪ್ರಭು ಒಡ್ಡೂರು, ರಾಜೇಶ್ ನಾಯಕ್ ಬೋಳಂಗಡಿ, ಹಿರಿಯರಾದ ಕೃಷ್ಣ ಪ್ರಭು ಮುದಲಡ್ಕ, ಮುಂತಾದವರು ಉಪಸ್ಥಿತರಿದ್ದರು. 

ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್ ಪೂಂಜಾಲ್ ಕಟ್ಟೆ, ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. 

ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಪ್ರಶಾಂತ್ ನಾಯಕ್ ಸಿದ್ದಕಟ್ಟೆ, ಮಧುಸೂಧನ್ ಪ್ರಭು ಬಜಪ್ಪಾಲ್, ಸ್ವಾತಿ ನಾಯಕ್ ಒಡ್ಡೂರು, ಸುಶ್ಮಿತಾ ನಾಯಕ್,  ಭೂಮಿಕಾ ಪಾಟೀಲ್, ಪ್ರಜ್ಞಾ ನಾಯಕ್, ರಕ್ಷಾ ಪ್ರಭು ಓಮ, ಮುಂತಾದವರು ಶಿಬಿರವನ್ನು ನಿವ೯ಹಿಸಿದರು.

ಶಿಭಿರಾಥಿ೯ಗಳಾದ ಪ್ರಶಾಂತ್ ನಾಯಕ್ ವೇಣೂರು ವಂದಿಸಿ, ಆಕೃತಿ ಕಾರ್ಯಕ್ರಮವನ್ನು ನಿರೂಪಿಸಿದರು.