ಪುತ್ತೂರು, ಅರಿಯಡ್ಕ,: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಾಗೂ ಅರಿಯಡ್ಕ ಗ್ರಾಮ ಪಂಚಾಯತ್ಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ  ಎ.ಜೆ. ಶೆಟ್ಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರವನ್ನು ದ.ಕ.ಜ.ಹಿ.ಪ್ರಾ. ಶಾಲೆ, ಪಾಪೆಮಜಲಿನಲ್ಲಿ ಆಯೋಜಿಸಲಾಯಿತು. ಮಾತ್ರವಲ್ಲದೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆಯುತ್ತಿರುವ ಆರು ದಿನಗಳ ಗ್ರಾಮೀಣ ಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ನಡೆಸಲಾಯಿತು. 

ಸವಣೂರಿನ ವಿದ್ಯಾ ರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಎ.ಜೆ. ಶೆಟ್ಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು ಇದರ ಎಂಡಿಎಸ್ ವಿಭಾಗದ ಪ್ರಾಧ್ಯಾಪಕರಾದ ಡಾ| ಸತ್ಯಪ್ರಿಯರವರು  ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಭಾಗವಹಿಸಿದರು  ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಮಾಹಿತಿ  ನೀಡಿದರು.

ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್, ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ಕುಟ್ಯಾಡಿ, ಕೋಟಿ ಚೆನ್ನಯ ಯೂತ್ ಕ್ಲಬ್ ಅಧ್ಯಕ್ಷ ಜಗದೀಶ್ ಬಿ, ಸಚಿನ್ ಪಾಪೆಮಜಲು, ಅಕ್ಷಯ ರಜಪೂತ್, ಗ್ರಾ.ಪಂ ಸದಸ್ಯ ಅಮ್ಮಣ್ಣ ರೈ ಡಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲತಾ ರವರು ಉಪಸ್ಥಿತರಿದ್ದರು. ಶಾಲಾ ಎಸ್ ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿಭಾಗದ ಸಂಯೋಜಕರಾದ ಶ್ರೀಮಣಿ, ಸಹಾಯಕ ಪ್ರಾಧ್ಯಾಪಕರಾದ ಪ್ರತಿಭಾ ಹಾಗೂ ಶೀತಲ್ ಕುಮಾರ್ ಮತ್ತು  ಸಮಾಜಕಾರ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿ ಚೇತನಾ, ಅರಿಯಡ್ಕ ಪ್ರದೇಶದ ಸುತ್ತುಮುತ್ತಲಿನ ಜನರು ಭಾಗವಹಿಸಿದ್ದರು.

ಶಿಬಿರದಲ್ಲಿ ದಂತ ತಪಾಸಣೆ, ಸಾಮಾನ್ಯ ಔಷಧ ಸಮಾಲೋಚನೆ, ಗಂಟಲು, ಕಿವಿ ಮತ್ತು ಮೂಗು (ಇಎನ್ಟಿ) ತಪಾಸಣೆ, ಇಸಿಜಿ ಪರೀಕ್ಷೆಗಳು, ಮಧುಮೇಹ ತಪಾಸಣೆ, ಸ್ತ್ರೀರೋಗ ಪರೀಕ್ಷೆಗಳು, ಕಣ್ಣಿನ ತಪಾಸಣೆ, ಚರ್ಮರೋಗ ಸಮಾಲೋಚನೆಗಳು ಮತ್ತು ಮಕ್ಕಳ ತಪಾಸಣೆಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಒಳಗೊಂಡಿತ್ತು. ಶಿಬಿರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಸೇವೆಗಳನ್ನು ಪಡೆದರು. ಕವನಾ ಮತ್ತು ತಂಡದವರು ಪ್ರಾರ್ಥಿಸಿ, ಶಿವ ಕಾರ್ತಿಕ್ ಸ್ವಾಗತಿಸಿದರು. ರಾಚೆಲ್ ಸಿಲ್ವೆಸ್ಟರ್ ಧನ್ಯವಾದ ಸಲ್ಲಿಸಿ, ಅಶ್ವಿನಿ ರೈ ನಿರೂಪಿಸಿದರು.