ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಕೋಟಿ-ಚೆನ್ನಯ ಗೆಳೆಯರ ಬಳಗ ಪಾಪೆಮಜಲು, ರೋಟರಿ ಕ್ಯಾಂಫ್ಕೋ ಬಡ್ಲ್ ಸೆಂಟರ್, ಮತ್ತು ಅರಿಯಡ್ಕ ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಅರಿಯಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 26-5-2024 ರಂದು ಕೋಟಿ-ಚೆನ್ನಯ ಗೆಳೆಯರ ಬಳಗ ಅಧ್ಯಕ್ಷರಾದ  ಜಗದೀಶ್. ಬಿ ರವರ ಅಧ್ಯಕ್ಷತೆಯಲ್ಲಿ  ಜರುಗಿತು.

ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾನ್ಯ ಪ್ರಾಂಶುಪಾಲರು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇವರು ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.  ಸಭೆಯಲ್ಲಿ ಹಾಜರಿದ್ದ ಸಂಪನ್ಮೂಲ ವ್ಯಕ್ತಿಗಳಾದ ಡಾ| ಸೀತಾರಾಮ್ ಭಟ್ ಗೌರವಾನ್ವಿತ ವೈದ್ಯಧಿಕಾರಿಗಳು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ರವರು ಮಾತನಾಡಿ ರಕ್ತದಾನದ ಮಹತ್ವ, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ  ವಿವರಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಜಗದೀಶ್ ಬಿ ಕೋಟಿ ಚೆನ್ನಯ್ಯ ಗೆಳೆಯರ ಬಳಗ ಪಾಪೆಮಜಲು ಇವರು  ಸಂದರ್ಭೋಚಿತವಾಗಿ ಮಾತನಾಡಿದರು. ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಶ್ರೀಮಣಿ ಇವರು ಸ್ವಾಗತಿಸಿ, ಅರುಣ್ ಫೆರ್ನಾಂಡಿಸ್ ವಂದಿಸಿದರು. 

ಹಲವರು ನಾಗರಿಕರು ಬಂದು ರಕ್ತದಾನ ಮಾಡಿದರು. ಸ್ನಾತಕೋತ್ತರ  ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ದೀಕ್ಷಿತ್ ಕುಮಾರ್ ರೈ ಬಿ  ಮಂಜುನಾಥ್ ಪಿ ವಿ ನಾಯ್ಕ ಶಿವ ಕಾರ್ತಿಕ್  ರಕ್ತದಾನ ಶಿಬಿರದ ಆಯೋಜನೆಯಲ್ಲಿ ನಿರೂಪಣೆಗೈದರು.  ಕಾಲೇಜಿನ  ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಕೋಟಿ ಚೆನ್ನಯ ಗೆಳೆಯರ ಬಳಗದ ಸದಸ್ಯರು ಮತ್ತು ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.