ಪುತ್ತೂರು : ಈ ದಿನ ಸಂಜೆಯ ಸಮಯದಲ್ಲಿ ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರು ಪ್ರವೀಣ್ ನೆಟ್ಟಾರ್ ರವರ ಹುಟ್ಟೂರಾದ ಬೆಳ್ಳಾರೆ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರ ಜೊತೆಗೆ ಹಾಗೂ  ಅವರ ಜೊತೆಗೂ ದೇವರು ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಪೂಜಾ ವಿಧಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ  ಶ್ರೀಗಳ ಜೊತೆಯಲ್ಲಿ ನಮ್ಮ ಬಿಲ್ಲವ ಸಮುದಾಯದ ಕುದ್ರೋಳಿ ದೇವಸ್ಥಾನದ ಸಮಿತಿಯ ಕಾನೂನು ಸಲಹೆಗಾರರಾಗಿರ್ತಕ್ಕಂತ ಪದ್ಮರಾಜ್ ನ್ಯಾಯವಾದಿಗಳು ಮತ್ತು ರಾಜೇಶ್ ಅವರು ಜಯಂತ್ ನಾಡುಬೇಯಿಲ್ ರವರು ಚಿದಾನಂದ್ ರವರು ನಿತೀಶ್ ಕೊಠಯ್ಯನ್ ರವರು ಜಯ ವಿಕ್ರಂ ರವರು ಮತ್ತು ಅನೇಕ ಬಿಲ್ಲವ ಸಮುದಾಯದ ಮುಖಂಡರು ಶ್ರೀಗಳ ಜೊತೆ ಪಾಲ್ಗೊಂಡಿದ್ದರು.