ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಾಯಕತ್ವದಲ್ಲಿ ಸೇರಿದ 14 ಪಕ್ಷಗಳ ಸದಸ್ಯರು ಪೆಗಾಸಸ್ ಬಗೆಗೆ ಮುಂದಿನ ನಡೆ ಬಗೆಗೆ ಚರ್ಚಿಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು.

ಒಕ್ಕೂಟ ಸರಕಾರವು ಮೋದಿ ನಾಯಕತ್ವದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಪೆಗಾಸಸ್ ಮೂಲಕ ಜಗತ್ತಿಗೆ ಹರಾಜು ಹಾಕಿದೆ ಎಂದು ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ಸಿಪಿಎಂ, ಶಿವಸೇನಾ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ, ಎನ್‌ಸಿ ಮೊದಲಾದ 14 ಪಕ್ಷಗಳ ನಾಯಕರು ಇಲ್ಲವೇ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.