ಮಂಗಳೂರು, ಏ.16: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮುಂಬರುವ ಮಳೆಗಾಲದ ಮುಂಜಾಗೃತ ಕ್ರಮವಾಗಿ ಬೃಹತ್ ಮಳೆ ನೀರು ಚರಂಡಿಗಳು, ರಸ್ತೆ ಬದಿಯ ಮಳೆ ನೀರು ಚರಂಡಿಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಮತ್ತು ಸಣ್ಣ ಚರಂಡಿಯ ಹೂಳೆತ್ತುವ ಕಾಮಗಾರಿಯನ್ನು ಪಾಲಿಕೆಯ ಪೌರ ಕಾರ್ಮಿಕರಿಂದ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರು ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಅಥವಾ ಕಟ್ಟಡದ ಅವಶೇಷಗಳನ್ನು ಮಳೆ ನೀರು ಚರಂಡಿಗೆ ಹಾಕದಂತೆ ಸೂಚಿಸಿದೆ.ಮಳೆ ನೀರು ಚರಂಡಿಯ ಹೂಳೆತ್ತುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಪಾಲಿಕೆಯ ಸಹಾಯವಾಣಿ ಸಂಖ್ಯೆ-0824-2220306, 22203019 ಗೆ ಅಥವಾ ವಾಟ್ಸ್‍ಆ್ಯಪ್ (Whats App) ಸಂಖ್ಯೆ 9449007722 ಸಂಪರ್ಕಿಸಲು ಹಾಗೂ ಮಳೆ ನೀರು ಚರಂಡಿಗಳ ಹೂಳೆತ್ತುವ ಸಮಯದಲ್ಲಿ ಪಾಲಿಕೆಯೊಂದಿಗೆ ಸಹಕರಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.