ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಮೇ 29 ಭಾರತ ದೇಶ ಕಂಡ ಅಪ್ರತಿಮ ಹೋರಾಟಗಾರ, ದೇಶಭಕ್ತ ಚಿತ್ತೋಡದ ಮಹಾರಾಣಾ ಪ್ರತಾಪ ಸಿಂಹನ ಜಯಂತಿ. ಮರಣಿಸಿದಾಗ ಶತ್ರುಗಳು ಕೂಡಾ ಕಣ್ಣೀರಿಟ್ಟ ತೇಜಸ್ವಿ, ಪ್ರಖರ ದೇಶಪ್ರೇಮಿ.
ಚಿತ್ತೋಡವನ್ನು ಕಳಕೊಂಡು ಕಾಡುಮೇಡುಗಳಲ್ಲಿ ಅಲೆಯುತ್ತಿದ್ದಾಗ ಸ್ವತಃ ಅಕ್ಬರನು-ನನಗೆ ಶರಣಾದರೆ ನಿನ್ನ ರಾಜ್ಯ ಹಿಂತಿರುಗಿ ಕೊಡುವೆ ಎನ್ನುವನು. ಆದರೆ ಅದಕ್ಕೆ ಮೊದಲೇ ರಾಜ್ಯ ಚಿತ್ತೋಡವನ್ನು ಪಡೆಯುವ ವರೆಗೆ ಪತ್ರಾವಳಿಯಲ್ಲಿ ಭೋಜನ ಮಾಡುವ, ನೆಲದಲ್ಲಿ ಅಥವಾ ಹುಲ್ಲಿನ ಮೇಲೆ ಮಲಗುವ ಶಪಥ ಮಾಡಿ ಅದರಂತೆ ನಡೆದು ರಜಪೂತ ಕುಲದ ಪರಾಕ್ರಮ ಮೆರೆದು ರಾಜ್ಯ ಪಡೆದನು.
ಚೇತಕ್ ಈತನ ಆತ್ಮೀಯ ಪ್ರಚಂಡ ಕುದುರೆ ಆಗಿತ್ತು. ಸೂರ್ಯ ವಂಶದ ರಜಪೂತ ಸಿಸೋದಿಯಾ ಪಂಗಡದ ಈತ ಮೇವಾಡದ ರಾಣಿ ಅಜ್ಬದೇ ಪುಣ್ವರ್ ಹಾಗೂ ಫೂಲ್ ಬಾಯಿ ರಾಥೋರ್ ರನ್ನು ಮದುವೆಯಾಗಿದ್ದ.
ಇಂತಹ ದೇಶಾಭಿಮಾನ, ಭಾರತೀಯ ಸಂಸ್ಕೃತಿ ಮೆಚ್ಚುವ, ದೃಢಸಂಕಲ್ಪದ ಯುವ ಜನಾಂಗದಿಂದ ಮಾತ್ರ ಭಾರತದ ಏಳಿಗೆ ಸಾಧ್ಯ.