ಉಲಾಯಿಬೊಟ್ಟು ಪರಾರಿಯಲ್ಲಿ ಎಂಟು ವರುಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಅದೇ ಟೈಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಮಾಹಿತಿಯನ್ನು ಪೋಲೀಸು ಕಮಿಶನರ್ ಶಶಿಕುಮಾರ್ ನೀಡಿದ್ದಾರೆ.

ಬಂಧಿತರಲ್ಲಿ ಮೂವರು ಮಧ್ಯ ಪ್ರದೇಶದವರು ಮತ್ತು ಒಬ್ಬ ಜಾರ್ಖಂಡ್‌ನವ. ಅತ್ಯಾಚಾರ ನಡೆಸಿದಾಗ ಬಾಲಕಿ ಕಿರುಚಿಕೊಂಡಳು. ಆಗ ಹೆದರಿದ ಆರೋಪಿಗಳು ಬಾಲಕಿಯನ್ನು ಕೊಂದು ಮೋರಿಗೆ ಎಸೆದಿದ್ದರು. ಬಾಲಕಿ ಅದೇ ಟೈಲ್ಸ್ ಕಂಪೆನಿಯಲ್ಲಿ ಕೆಲಸ ಮಾಡುವ ಜಾರ್ಖಂಡ್ ಕೂಲಿ ಕಾರ್ಮಿಕರ ಮಗಳು.