2008ರಿಂದ 2015ರ ನಡುವೆ ದಿಲ್ಲಿಯಲ್ಲಿ 30 ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ರವೀಂದ್ರ ಕುಮಾರ್ ಎಂಬ ಸೈಕೋಪಾತ್‌ಗೆ ದಿಲ್ಲಿಯ ರೋಹಿಣಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು.

6 ವರುಷದ ಬಾಲಕಿಯ ಅಪಹರಣ, ರೇಪ್ ಮತ್ತು ಮರ್ಡರ್‌ನಲ್ಲಿ 2015ರಲ್ಲಿ ಪೋಲೀಸರು ರವೀಂದ್ರ ಕುಮಾರ್‌ನನ್ನು ಬಂಧಿಸಿದ್ದರು. ಈಗ ಶಿಕ್ಷೆ ಆಗಿರುವುದು ಆ ಪ್ರಕರಣದಲ್ಲಿ. ಆತನ ವಿಚಾರಣೆಯಿಂರ ಆತ ರೇಪ್ ಆಂಡ್ ಮರ್ಡರ್ ಮಾಡಿದ ಅತಿ ಪುಟ್ಟ ಬಾಲಕಿ ಎರಡು ವರುಷದ್ದಾದರೆ ಅತೀ ದೊಡ್ಡ ಬಾಲಕಿ 12 ವರುಷದ್ದು. 30ರಷ್ಟು ಬಾಲಕಿಯರನ್ನು ಮುಗಿಸಿರುವುದಾಗಿ ಈ ಸೈಕೋಪಾತ್ ತಿಳಿಸಿದ್ದಾನೆ.