ಪಡುವಣ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಸುದೇಬ್‌ಪುರ ಗ್ರಾಮದ ಕೂಲಿ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲಿ ದಿಢೀರನೆ 100 ಕೋಟಿ ರೂಪಾಯಿ ಪ್ರತ್ಯಕ್ಷವಾಗಿದೆ.

ನೂರು ಕೋಟಿ ರೂಪಾಯಿ ಎಲ್ಲಿಂದ, ತನಿಖೆಗೆ ಹಾಜರಾಗುವಂತೆ ಪೋಲೀಸರು ನೋಟೀಸು ಕೊಟ್ಟಾಗಲೆ ತನ್ನ ಖಾತೆಯಲ್ಲಿ ನೂರು ಕೋಟಿ ರೂಪಾಯಿ ಇರುವುದು ನಾಸಿರುಲ್‌ಗೆ ಗೊತ್ತಾಗಿದೆ. ಸ್ವಿಸ್ ಬ್ಯಾಂಕ್ ದಾರಿ ತಪ್ಪಿ ಬಂದಿರಬಹುದು ಎನ್ನುವುದು ಕೆಲವರ ಅಂಬೋಣ.