ನಿಯಂತ್ರಣ ಕಳೆದುಕೊಂಡಿರುವ ಚೀನಾದ ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ಒಂದು ಭಾಗ ಭೂ ಕಕ್ಷೆ ಪ್ರವೇಶಿಸಿದರೂ ಅಪಾಯ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವನ್‌ವಿನ್ ತಿಳಿಸಿದರು.
ಭೂಕಕ್ಷೆ ಪ್ರವೇಶಿಸುವ ರಾಕೆಟ್‌ನ ಭಾಗ 18 ಟನ್ ಇದ್ದರೂ ಅಂತರದಲ್ಲೇ ಉರಿದು ಬೂದಿಯಾಗುವ ಅದರ ಚೂರು ಪಾರು ಮಾತ್ರ ಭೂಮಿಗೆ ಬೀಳುತ್ತದೆ. ಅದು ಜನ ವಸತಿಯತ್ತ ಬೀಳುವ ಸಾಧ್ಯತೆ ತೀರಾ ದೂರದ್ದು ಎಂದು ಸ್ಪಷ್ಟೀಕರಿಸಲಾಗಿದೆ.