ಕರ್ಫ್ಯೂ ಜಾರಿಯಲ್ಲಿ ಇದ್ದಾಗ ಯಾವ ಸಮಯದಲ್ಲಿಯೂ ಮಂಗಳೂರಿನಲ್ಲಿ ನಿರ್ಜನ ರಸ್ತೆ ನೋಡುವುದು ಸಾಧ್ಯವಾಗಿರಲಿಲ್ಲ. ಕಡೆಗೂ ಇಂದು ನಿರ್ಜನ ರಸ್ತೆ ನೋಡುವುದು ಸಾಧ್ಯವಾಗಿದೆ.

ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಆದರೆ ಜನರು ಪೂರ್ತಿ ಓಡಾಟ ನಿಲ್ಲಿಸಿರಲಿಲ್ಲ. ಈಗ ಲಾಕ್‌ಡೌನ್ ಹೇರಲಾಗಿದೆ. ಇದನ್ನು ಕೆಲವರು ಜೋಕ್‌ಡೌನ್ ಎಂದರೂ ಲಾಕ್‌ಡೌನ್ ಯಶಸ್ವಿ ಎಂದೇ ಹೇಳಬಹುದು.

ಇಂದೂ ಕೆಲವು ವಾಹನಗಳು 10 ಗಂಟೆಯ ಬಳಿಕವೂ ಓಡಾಡಿದವು. ಹಾಗೆ ಓಡಾಟ ಮಾಡಿದ ಜನರೂ ಕಂಡರು. ಆದರೆ ನಿನ್ನೆಗೆ ಹೋಲಿಸಿದರೆ ಆ ಸಂಖ್ಯೆ ತುಂಬ ಕಡಿಮೆ. ಅಷ್ಟೇ ಅಲ್ಲ ಮಧ್ಯಾಹ್ನದ ಬಳಿಕ ರಸ್ತೆ ನಿರ್ಜನವಾದುದನ್ನೂ ಕಾಣುವುದು ಸಾಧ್ಯವಾಯಿತು. ಆದ್ದರಿಂದ ಲಾಕ್‌ಡೌನ್ ಆರಂಭ  ಯಶಸ್ವಿಯಾಗಿ ಆಗಿದೆ ಎಂದು ಹೇಳಬಹುದು.